ನಿಮ್ಮ ಮಗುವಿನ ಬಾಯಲ್ಲಿ ಜೊಲ್ಲು ಸೋರುವುದಾ….? ತಡೆಗಟ್ಟಲು ಇಲ್ಲಿದೆ ‘ಮನೆ ಮದ್ದು’

ಚಿಕ್ಕ ಮಕ್ಕಳ ಬಾಯಲ್ಲಿ ಜೊಲ್ಲು ಸುರಿಯುವುದು ಸಹಜ. ಆದರೆ ಕೆಲವೊಮ್ಮೆ ದೊಡ್ಡವರ ಬಾಯಲ್ಲೂ ಅವರಿಗೆ ತಿಳಿಯದಂತೆ ಜೊಲ್ಲು ಸುರಿಯುತ್ತಿರುತ್ತದೆ. ರಾತ್ರಿ ನಿದ್ದೆಯಲ್ಲೂ ಕೂಡ ಹೆಚ್ಚಿನವರ ಬಾಯಲ್ಲಿ ಜೊಲ್ಲು ಸುರಿಯುತ್ತದೆ. ಇದನ್ನು ತಡೆಗಟ್ಟಲು ಇಲ್ಲಿದೆ ನೋಡಿ ಮನೆಮದ್ದು.

* ದಿನಕ್ಕೆ ಎರಡು ಲವಂಗವನ್ನು ಬಾಯಲ್ಲಿ ಅಗಿದರೆ ಹೆಚ್ಚು ಜೊಲ್ಲು ಬರುವುದು ನಿಲ್ಲುತ್ತದೆ. ಚಕ್ಕೆ ಪುಡಿಯನ್ನು ನೀರಲ್ಲಿ ಬೆರೆಸಿ ಕಷಾಯ ಮಾಡಿ ಬಾಯಿ ಮುಕ್ಕಳಿಸಿದರೆ ಜೊಲ್ಲು ಕಡಿಮೆಯಾಗುತ್ತದೆ.

* ಅಡಿಕೆ ಚೂರನ್ನು ಪುಡಿ ಮಾಡಿ ಜೇನುತುಪ್ಪದ ಜೊತೆ ಕಲಸಿ ಬಾಯಿಯೊಳಗೆ ಲೇಪಿಸಿ ಹತ್ತು ನಿಮಿಷದ ನಂತರ ತೊಳೆದರೆ ಉತ್ತಮ ಪರಿಣಾಮ ಬೀರುತ್ತದೆ. ಬೆಟ್ಟದ ನೆಲ್ಲಿಕಾಯಿ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಊಟದ ನಂತರ ಸೇವಿಸಿದರೆ ಜೊಲ್ಲು ಕಡಿಮೆಯಾಗುತ್ತದೆ.

* ಕರಿಮೆಣಸಿನ ಪುಡಿ, ಶುಂಠಿ ಪುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಹೆಚ್ಚು ಸುರಿಯುವ ಜೊಲ್ಲು ನಿಲ್ಲುತ್ತದೆ. ಏಲಕ್ಕಿಯನ್ನು ನೀರಲ್ಲಿ ಸೇರಿಸಿ ಕಷಾಯ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.

* ಕಾಫಿ ಬೀಜದ ಪುಡಿಯನ್ನು ನಾಲಿಗೆ ಕೆಳಗೆ ಇಟ್ಟುಕೊಂಡರೆ ಅತಿ ಹೆಚ್ಚು ಜೊಲ್ಲು ನಿಲ್ಲುತ್ತದೆ. ಹಸಿ ಶುಂಠಿಯನ್ನು ನೀರಲ್ಲಿ ಬೆರೆಸಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಅತಿ ಜೊಲ್ಲು ಸಮಸ್ಯೆ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read