ನಿಮ್ಮ ಕನಸುಗಳು ನೀಡುತ್ತೆ ಭವಿಷ್ಯದ ಕೆಲವು ಸಂದೇಶ

ನಾವು ಕಾಣುವ ಪ್ರತಿಯೊಂದು ಕನಸಲ್ಲೂ ಒಂದೊಂದು ಸಂದೇಶವಿರುತ್ತದೆ ಎಂದು ಕೆಲವು ವರದಿಗಳು ಹೇಳುತ್ತವೆ. ಶಾಸ್ತ್ರಗಳ ಪ್ರಕಾರ ನಾವು ಬೆಳಗ್ಗಿನ ಜಾವ ಕಂಡ ಕನಸಿನ ಫಲ ನಮಗೆ 10 ದಿನಗಳ ಒಳಗೆ ಸಿಗುತ್ತದೆಯಂತೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಜಾತಕದಲ್ಲಿ ರಾಹುವಿನ ದೆಸೆಯಿದ್ದರೆ, ರಾಹು ಪೀಡಿತರಾದರೆ ಕೆಟ್ಟ ಕನಸುಗಳು ಬೀಳುತ್ತವೆಯಂತೆ. ಒಂದೊಂದು ಕನಸೂ ಒಂದೊಂದು ಅರ್ಥವನ್ನು ಸೂಚಿಸುತ್ತದೆ.

ಕನಸಿನಲ್ಲಿ ನಾವು ಮಾತ್ರೆ ನುಂಗುವಂತೆ ಕಾಣಿಸಿದರೆ ನಮ್ಮ ಮುಂದಿನ ದಿನಗಳಲ್ಲಿ ಕಷ್ಟಗಳು ಬರುತ್ತವೆ.

ಕನಸಲ್ಲಿ ಪಾತರಗಿತ್ತಿ ಬಂದು ಅದನ್ನು ನೀವು ಸಾಯಿಸಿದ ಹಾಗೆ ಕಂಡರೆ ನಿಮಗೆ ವ್ಯಾಪಾರದಲ್ಲಿ ನಷ್ಟವಾಗಬಹುದು.

ಕನಸಲ್ಲಿ ಮಗು ಅಳುತ್ತಿದ್ದರೆ, ಪೊರಕೆ ಕಾಣಿಸಿದರೆ ಅದು ಕೂಡ ಅಶುಭದ ಸಂಕೇತ.

ಕನಸಲ್ಲಿ ಯಾರಾದರೂ ಸತ್ತು ಅವರನ್ನು ನೋಡಿ ನೀವು ಅಳುತ್ತಿದ್ದರೆ ಅವರ ಆಯುಷ್ಯ ಹೆಚ್ಚಲಿದೆ ಎಂದರ್ಥ.

ಕನಸಲ್ಲಿ ನೀವು ಯಾವುದಾದರೂ ಹಣ್ಣನ್ನು ನೋಡಿದರೆ ಅಥವಾ ತಿಂದರೆ ಅದು ಶುಭದ ಸಂಕೇತ.

ಕನಸಿನಲ್ಲಿ ನೀವು ಮಗುವಿನ ಪಾಲನೆ ಮಾಡುತ್ತಿದ್ದರೆ ಅದು ಕುಟುಂಬದವರಿಗೆಲ್ಲ ಶುಭ.

ಕನಸಲ್ಲಿ ಆಟಿಕೆ ಕಾಣಿಸಿದರೆ ನಿಮಗೆ ಸಂತಾನ ಪ್ರಾಪ್ತವಾಗಲಿದೆ ಎಂದರ್ಥ.

ಕನಸಿನಲ್ಲಿ ನೀವು ಯಾವುದಾದರೂ ಸಿಹಿ ತಿಂಡಿ ತಿಂದ ಹಾಗೆ ಕಂಡರೆ ಅದು ನಿಮ್ಮ ಆರೋಗ್ಯ ಹಾಳಾಗುವುದರ ಸಂಕೇತ.

ಕನಸಿನಲ್ಲಿ ನಿಮ್ಮ ಹಲ್ಲು ಬಿದ್ದ ಹಾಗೆ ಅನಿಸಿದರೆ, ನಿಮ್ಮ ಹತ್ತಿರದವರ ಮೃತ್ಯುವಾಗುತ್ತದೆ ಎಂದರ್ಥ.

ಕನಸಲ್ಲಿ ಕೊಚ್ಚೆ ಕಂಡರೆ ಧನಪ್ರಾಪ್ತಿಯಾಗುತ್ತದೆ ಎಂಬ ಸಂಕೇತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read