ನಿಮ್ಮ ಅದೃಷ್ಟ ಹೆಚ್ಚಿಸುತ್ತೆ ಅಕ್ಕಿಯಿಂದ ಮಾಡುವ ಈ ಕೆಲಸ

ಲಕ್ಷಾಧಿಪತಿಯಾಗುವ ಕನಸನ್ನು ಪ್ರತಿಯೊಬ್ಬರು ಕಾಣ್ತಾರೆ. ಕೆಲವರು ಹಗಲು-ರಾತ್ರಿ ಇದಕ್ಕಾಗಿ ಕಷ್ಟಪಡ್ತಾರೆ. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ಕೈಗೆ ಬಂದ ಹಣ ಮನೆಯಲ್ಲಿ ನೆಲೆ ನಿಲ್ಲೋದಿಲ್ಲ. ಮನೆಯಲ್ಲಿರುವ ಅಕ್ಕಿ ನಿಮ್ಮ ಅದೃಷ್ಟ ಬದಲಿಸಬಹುದು. ಪೂಜೆಗೂ ಬಳಸುವ ಅಕ್ಕಿಯ ಕೆಲ ಉಪಾಯಗಳು ಶ್ರೀಮಂತರನ್ನಾಗಿ ಮಾಡುತ್ತದೆ.

ಯಾವುದೇ ದಿನ ಬ್ರಹ್ಮಮುಹೂರ್ತದಲ್ಲಿ ಎದ್ದು ಎಲ್ಲ ನಿತ್ಯ ಕಾರ್ಯ ಮುಗಿಸಿ. ನಂತ್ರ ಕೆಂಪು ಬಣ್ಣದ ಹೊಳೆಯುವ ಬಟ್ಟೆ ತೆಗೆದುಕೊಳ್ಳಿ. ಇದ್ರ ಮೇಲೆ ಅಕ್ಕಿಯ 21 ಕಾಳುಗಳನ್ನು ಹಾಕಿ. ಎಲ್ಲ 21 ಅಕ್ಕಿ ಕಾಳುಗಳು ಪೂರ್ಣವಾಗಿರಬೇಕು. ಮುರಿದಿರದಂತೆ ನೋಡಿಕೊಳ್ಳಿ. ಅರಿಶಿನಕ್ಕೆ ಸ್ವಲ್ಪ ನೀರು ಹಾಕಿ 21 ಅಕ್ಕಿ ಕಾಳಿಗೆ ಇದನ್ನು ಹಾಕಿ ಕಲಸಿ. ಅರಿಶಿನದ ಅಕ್ಕಿಯನ್ನು ಸಿದ್ಧಪಡಿಸಿ.

ಅರಿಶಿನದ ಅಕ್ಕಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ. ನಂತ್ರ ತಾಯಿ ಲಕ್ಷ್ಮಿ ಪೂಜೆ ಮಾಡಿ. ಜೊತೆಗೆ ಅರಿಶಿನದ ಅಕ್ಕಿಯನ್ನೂ ಪೂಜೆ ಮಾಡಿ ಕಾಳನ್ನು ಪರ್ಸ್ ನಲ್ಲಿಟ್ಟುಕೊಳ್ಳಿ. ಈ ಅಕ್ಕಿಕಾಳು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಅದೃಷ್ಟ ಬದಲಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read