ನಿಮಗೆ ಅಗತ್ಯವಿಲ್ಲದ ಈ ಸೌಂದರ್ಯ ವರ್ಧಕಗಳನ್ನು ಖರೀದಿಸಬೇಕಿಲ್ಲ…..!

ಸೌಂದರ್ಯ ವರ್ಧಕಗಳನ್ನು ಖರೀದಿಸಲು ಶಾಪಿಂಗ್ ಗೆ ಹೋದಾಗ ಅಗತ್ಯವಿಲ್ಲದ ವಸ್ತುಗಳನ್ನು ಆರಿಸುತ್ತೇವೆ. ಆದರೆ ಎಲ್ಲಾ ಸೌಂದರ್ಯ ವರ್ಧಕಗಳನ್ನು ಕೊಂಡುಕೊಳ್ಳುವ ಅವಶ್ಯಕತೆಯಿಲ್ಲ. ಅದರ ಬದಲು ಮನೆಯಲ್ಲಿಯೇ ಸಿಗುವಂತಹ ವಸ್ತುಗಳನ್ನು ಬಳಸಬಹುದು. ಅಂತಹ ಸೌಂದರ್ಯ ವರ್ಧಕಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

*ಕಣ್ಣಿನ ಮೇಕಪ್ ಹೋಗಲಾಡಿಸಲು ತೆಗೆಯಲು ಬಳಸುವ ಕ್ರೀಂಗಳನ್ನು ಖರೀದಿಸುವ ಅವಶ್ಯಕತೆ ಇಲ್ಲ. ಇದರಿಂದ ಕಣ್ಣಿಗೆ ಹಾನಿಯಾಗಬಹುದು. ಹಾಗಾಗಿ ಅದರ ಬದಲು ತೆಂಗಿನೆಣ್ಣೆ, ಬೇಬಿ ಆಯಿಲ್ ಬಳಸಬಹುದು.

*ಕುತ್ತಿಗೆಗೆ ಬಳಸುವ ಕ್ರೀಂಗಳನ್ನು ಖರೀದಿಸುವ ಅಗತ್ಯವಿಲ್ಲ. ಯಾಕೆಂದರೆ ಅದರ ಬದಲು ಮುಖಕ್ಕೆ ಹಚ್ಚುವ ಕ್ರೀಂಗಳನ್ನೇ ಕುತ್ತಿಗೆಗೆ ಬಳಸಬಹುದು.

*ಸ್ಕಿನ್ ಟೋನರ್ ಗಳನ್ನು ಖರೀದಿಸುವ ಬದಲು ಕ್ಲೆನ್ಸರ್ ಗಳನ್ನೇ ಟೋನರ್ ರೀತಿ ಬಳಸಬಹುದು.

*ಮುಖಕ್ಕೆ ಬಳಸುವ ಸುವಾಸನಭರಿತ ತೈಲಗಳನ್ನೊಳಗೊಂಡ ಮುಖದ ಸ್ಪ್ರೇಗಳ ಬದಲು ಮುಖವನ್ನು ರಿಫ್ರೆಶ್ ಮಾಡಲು ಚರ್ಮವನ್ನು ಒದ್ದೆಯಾಗಿ ಒರೆಸಿಕೊಳ್ಳಬಹುದು.

*ಕಾಸ್ಮೆಟಿಕ್ ಲಿಪ್ ಎಕ್ಸಪೋಲಿಯೇಟರ್ ಬದಲು ಜೇನುತುಪ್ಪ ಮತ್ತು ಸಕ್ಕರೆಯನ್ನು ಸೇರಿಸಿ ಮನೆಯಲ್ಲಿಯೇ ತಯಾರಿಸಿದ ಲಿಪ್ ಸ್ಕ್ರಬ್ ನ್ನು ಬಳಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read