ನಿಮಗೂ ಕಾಡುತ್ತಿದೆಯಾ ಒಂಟಿತನ…..?

ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಒಂಟಿತನ ಕಾಡುತ್ತದೆ. ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ ಅನ್ನುವುದು ಮುಖ್ಯವಲ್ಲ. ಅವರು ನಿಮಗೆಷ್ಟು ಆಪ್ತರಾಗಿದ್ದಾರೆ ಅನ್ನುವುದು ಕೂಡಾ ಮುಖ್ಯವಾಗುತ್ತದೆ.

ಒಂಟಿತನದಿಂದ ಆರೋಗ್ಯ ಹಾಳಾಗುತ್ತದೆ. ಟಿ.ವಿ., ಮೊಬೈಲ್, ಕಂಪ್ಯೂಟರ್ ಗಳಿಂದ ಒಂಟಿತನಕ್ಕೆ ಪರಿಹಾರ ಸಿಗುವುದಿಲ್ಲ. ಫೋನ್ ನಲ್ಲಿ ಮಾತಾಡುವುದು ಮೆಸೇಜ್ ಮಾಡುವುದು ಕುರುಕಲು ತಿಂಡಿ ತಿಂದಂತೆ. ಆದರೆ ಸ್ನೇಹಿತರನ್ನು, ಆಪ್ತರನ್ನು ಭೇಟಿಯಾಗಿ ಮಾತನಾಡುವುದು ಊಟ ಮಾಡಿದಂತೆ ತೃಪ್ತಿಯಾಗಿರುತ್ತದೆ. ಯಾವಾಗಲು ಒಳ್ಳೆಯದನ್ನೇ ಯೋಚಿಸಿ, ಅಕ್ಕಪಕ್ಕದವರೊಂದಿಗೆ ಬಂಧು- ಬಾಂಧವರೊಂದಿಗೆ ಉತ್ತಮ ಸ್ನೇಹ ಬೆಳೆಸಿ ಉಳಿಸಿಕೊಳ್ಳಿ.

ಒಂಟಿತನದಿಂದ ಸುಲಭವಾಗಿ ಅಪಾಯದಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ಮನಸ್ಸಿನ ಒಂಟಿತನ ಹೋಗಲಾಡಿಸಲು ದಿನದ ಕೆಲ ಸಮಯವನ್ನು ಆಪ್ತರೊಂದಿಗೆ ಮಾತುಕತೆ ಆಡುತ್ತಾ ಕಳೆಯಿರಿ. ಹಾಗೆಯೇ ಒಬ್ಬರೇ ಇರುವುದರಿಂದ ಸಹ ಕೆಲವೊಂದು ಪ್ರಯೋಜನವಿದೆ. ನಿಮ್ಮದೇ ಆದ ಯೋಚನೆ, ಭಾವನೆಗಳ ಬೆಳವಣಿಗೆಗೆ ಈ ಸಮಯವನ್ನು ಮೀಸಲಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read