ನಿನ್ನೆ ಮೊನ್ನೆ ಬಿಜೆಪಿಗೆ ಸೇರಿಕೊಂಡು ಏನೇನೋ ಮಾತಾಡ್ತಿದ್ದಾರೆ; ಸಚಿವ ಸುಧಾಕರ್ ವಿರುದ್ಧ HDK ಆಕ್ರೋಶ

ಚಿಕ್ಕಮಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವ ಹೇಳಿಕೆ ನೀಡುತ್ತಿದ್ದಾರೆ ಎಂಬ ಸಚಿವ ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನಿನ್ನೆ ಮೊನ್ನೆ ಬಿಜೆಪಿಗೆ ಸೇರಿಕೊಂಡು ಏನೇನೋ ಮಾತನಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

ಮೆಡಿಕಲ್ ಕಾಲೇಜಿಗೆ ವೈದ್ಯರನ್ನು ನೇಮಕ ಮಾಡಲು 20 ರಿಂದ 30 ಲಕ್ಷ ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ. ಆಸ್ಪತ್ರೆಯ ಪರಿಸ್ಥಿತಿ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯ ಪರಿಷತ್ ಸದಸ್ಯರ ಮಗಳಿಗೆ ಎಷ್ಟು ಲಕ್ಷ ಕೇಳಿದ್ರಿ ? ಮೆಡಿಕಲ್ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ನೇಮಕಕ್ಕೆ 50 ಲಕ್ಷ ರೂಪಾಯಿ ಹಣ ಕೇಳಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ನಾನು ಚರ್ಚೆ ಮಾಡಲ್ಲ, ಕಾಂಗ್ರೆಸ್ ಗೂ ನಮಗೂ ವ್ಯತ್ಯಾಸವಿದೆ. ಬೇಕು ಅಂದರೆ ದಾಖಲೆ ಸಮೇತ ಕೊಡುತ್ತೇವೆ. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಯಾರೆಲ್ಲ ಆರೋಪ ಮಾಡಿದರು ? ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಸದಾನಂದಗೌಡ ಮಾಡಿದ ಆರೋಪಗಳೇನು ? ಎಲ್ಲವೂ ಪೇಪರ್ ಕಟ್ಟಿಂಗ್ಸ್ ಇದೆ . 5 ಕೋಟಿ ಚೆಕ್ ವ್ಯವಹಾರದಲ್ಲಿ ಸದಾನಂದಗೌಡರದ್ದೇ ಸಹಿ ಇದೆ. ನಾನು ಸಾಬೀತು ಮಾಡದೇ ಇದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಯಡಿಯೂರಪ್ಪನವರೇ ಹಿಂದೆ ಹೇಳಿರಲಿಲ್ಲವೇ ? ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read