ನಾವು ಉಪಯೋಗಿಸುವ ʼಪೇಪರ್ ಕಪ್‌ʼಗಳು ಎಷ್ಟು ಡೇಂಜರ್‌ ಗೊತ್ತಾ….? ಸಂಶೋಧನೆಯಲ್ಲಿ ಬಹಿರಂಗವಾಯ್ತು ʼಶಾಕಿಂಗ್‌ ಸಂಗತಿʼ…..!

ಪ್ಲಾಸ್ಟಿಕ್‌ ಪರಿಸರ ಮತ್ತು ಆರೋಗ್ಯಕ್ಕೆ ಎಷ್ಟು ಹಾನಿಕರ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿಯೇ ಈಗ ಎಲ್ಲಾ ಕಡೆ ಪೇಪರ್‌ ಕಪ್‌ ಹಾಗೂ ಪ್ಲೇಟ್‌ಗಳನ್ನು ಬಳಸ್ತಾರೆ. ಪೇಪರ್ ಕಪ್‌ಗಳ ಬಳಕೆ ಆರೋಗ್ಯಕ್ಕೆ ಸಂಪೂರ್ಣವಾಗಿ ಸುರಕ್ಷಿತವೆಂದು ನೀವು ಭಾವಿಸಿದರೆ ಅದು ತಪ್ಪು. ಇತ್ತೀಚೆಗೆ ನಡೆದ ಅಧ್ಯಯನದ ಪ್ರಕಾರ ಕಾಗದದಿಂದ ಮಾಡಿದ ಕಪ್‌ಗಳು ಕೂಡ ಮಣ್ಣು ಮತ್ತು ಪ್ರಕೃತಿಯನ್ನು ಹಾಳುಮಾಡುತ್ತವೆ.

ಸ್ವೀಡನ್‌ನ ಗೋಥೆನ್‌ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಚಿಟ್ಟೆ ಸೊಳ್ಳೆ ಲಾರ್ವಾಗಳ ಮೇಲೆ ವಿವಿಧ ವಸ್ತುಗಳಿಂದ ಮಾಡಿದ ಬಿಸಾಡಬಹುದಾದ ಕಪ್‌ಗಳ ಪರಿಣಾಮವನ್ನು ಪರೀಕ್ಷಿಸಿದೆ. ಈ ಅಧ್ಯಯನದ ಮೇಲಿನ ವರದಿಯನ್ನು ಬಹಿರಂಗಪಡಿಸಿದೆ.ಕೆಲವು ವಾರಗಳ ಕಾಲ ಒದ್ದೆಯಾದ ಕೆಸರು ಮತ್ತು ನೀರಿನಲ್ಲಿ ಪೇಪರ್ ಕಪ್‌ಗಳು ಮತ್ತು ಪ್ಲಾಸ್ಟಿಕ್ ಕಪ್‌ಗಳನ್ನು ಹಾಕಿಡಲಾಗಿತ್ತು. ಅಲ್ಲಿ ಸೋರಿಕೆಯಾದ ರಾಸಾಯನಿಕಗಳು ಲಾರ್ವಾಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಗಮನಿಸಲಾಗಿದೆ.

ಈ ಕಪ್‌ಗಳು ಸೊಳ್ಳೆ ಲಾರ್ವಾಗಳ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಪ್ರಕಟವಾದ ಅಧ್ಯಯನದ ಪ್ರಕಾರ ಇದನ್ನು ಜೈವಿಕ ವಿಘಟನೀಯ ಎಂದು ಪರಿಗಣಿಸಲಾಗುತ್ತದೆ. ಅಂದರೆ ಸರಿಯಾದ ಪರಿಸ್ಥಿತಿಗಳಲ್ಲಿ ತೈಲ ಆಧಾರಿತ ಪ್ಲಾಸ್ಟಿಕ್‌ಗಳಿಗಿಂತ ವೇಗವಾಗಿ ಒಡೆಯಬಹುದು, ಆದರೆ ಇದು ಇನ್ನೂ ವಿಷಕಾರಿಯಾಗಿದೆ. ಬಯೋಪ್ಲಾಸ್ಟಿಕ್‌ಗಳು ನೀರಿನಂತಹ ಪರಿಸರವನ್ನು ತಲುಪಿದಾಗ ಪರಿಣಾಮಕಾರಿಯಾಗಿ ಒಡೆಯುವುದಿಲ್ಲ.

ಪ್ಲಾಸ್ಟಿಕ್ ಪ್ರಕೃತಿಯಲ್ಲಿ ಉಳಿಯುವ ಅಪಾಯವಿದೆ. ಈ ಮೈಕ್ರೋಪ್ಲಾಸ್ಟಿಕ್‌ಗಳನ್ನು ಪ್ರಾಣಿಗಳು ಮತ್ತು ಮನುಷ್ಯರು ಸೇವಿಸಬಹುದು. ಬಯೋಪ್ಲಾಸ್ಟಿಕ್‌ಗಳು ಸಾಂಪ್ರದಾಯಿಕ ಪ್ಲಾಸ್ಟಿಕ್‌ಗಳಂತೆಯೇ ರಾಸಾಯನಿಕಗಳನ್ನು ಹೊಂದಿರುತ್ತವೆ. ಪ್ಲಾಸ್ಟಿಕ್‌ನಲ್ಲಿರುವ ಕೆಲವು ರಾಸಾಯನಿಕಗಳು ವಿಷಕಾರಿ ಎಂದು ತಿಳಿದುಬಂದಿದೆ. ಇತರ ವಸ್ತುಗಳಿಗೆ ಹೋಲಿಸಿದರೆ ಪೇಪರ್ ಲೋಟಗಳು ಕೂಡ ಆರೋಗ್ಯಕ್ಕೆ ಅಪಾಯಕಾರಿ ಎಂಬುದು ಸಾಬೀತಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read