ಕಳೆದ ವಾರ ನೇಪಾಳದ ಅನ್ನಪೂರ್ಣ ಪರ್ವತವನ್ನು ಇಳಿಯುವಾಗ ನಾಪತ್ತೆಯಾಗಿದ್ದ ಭಾರತೀಯ ಪರ್ವತಾರೋಹಿ ಅನುರಾಗ್ ಮಾಲೂ ಜೀವಂತವಾಗಿ ಪತ್ತೆಯಾಗಿದ್ದಾರೆ. ಆದರೆ ಅವರ ಸ್ಥಿತಿ ಗಂಭೀರವಾಗಿದೆ.
“ಅವರು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ” ಎಂದು ಅವರ ಸಹೋದರ ಸುಧೀರ್ ದೃಢಪಡಿಸಿದ್ದಾರೆ.
ರಾಜಸ್ಥಾನದ ಕಿಶನ್‌ಗಢ್‌ನ ನಿವಾಸಿ 34 ವರ್ಷದ ಅನುರಾಗ್ ಮಾಲೂ ಕಳೆದ ವಾರ ಅನ್ನಪೂರ್ಣ ಪರ್ವತವನ್ನು ಏರಲು ಹೊರಟಿದ್ದರು. ಆದರೆ ಏಪ್ರಿಲ್ 17 ರಂದು ಇಳಿಯುವಾಗ 6,000 ಮೀಟರ್ ಎತ್ತರದಲ್ಲಿದ್ದಾಗ ಕೆಳಗೆ ಬಿದ್ದಿದ್ದರು. ಅನ್ನಪೂರ್ಣ ಪರ್ವತವು ವಿಶ್ವದ 10 ನೇ ಅತಿ ಎತ್ತರದ ಪರ್ವತವಾಗಿದೆ.
ಅನುರಾಗ್ ಮಾಲೂ ಅವರು 8,000 ಮೀಟರ್ ಎತ್ತರದ ಎಲ್ಲಾ 14 ಶಿಖರಗಳನ್ನು ಮತ್ತು ಎಲ್ಲಾ ಏಳು ಖಂಡಗಳಲ್ಲಿನ ಏಳು ಅತ್ಯುನ್ನತ ಪರ್ವತಗಳನ್ನು ಏರುವ ಉದ್ದೇಶವನ್ನು ಹೊಂದಿದ್ದಾರೆ. ವಿಶ್ವಸಂಸ್ಥೆಯ ಜಾಗತಿಕ ಗುರಿಗಳನ್ನು ಸಾಧಿಸುವತ್ತ ಜಾಗೃತಿ ಮೂಡಿಸುವ ಕ್ರಮವಾಗಿ ಅವರು ಈ ಆಲೋಚನೆ ಹೊಂದಿದ್ದಾರೆ.
ಅನುರಾಗ್ ಮಾಲೂ ಅವರು REX ಕರಮ್-ವೀರ್ ಚಕ್ರವನ್ನು ಪಡೆದಿದ್ದು ಭಾರತದಿಂದ 2041 ಅಂಟಾರ್ಕ್ಟಿಕ್ ಯೂಥ್ ಅಂಬಾಸಿಡರ್ ಆಗಿದ್ದಾರೆ.
https://twitter.com/indianimator/status/1648916796488159232?ref_src=twsrc%5Etfw%7Ctwcamp%5Etweetembed%7Ctwterm%5E1648916796488159232%7Ctwgr%5E887b4873f944db0d034fb0526913e2d9a136b522%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews9li3150295846716-epaper-dhfc063adcceaa4f4799aee937999624d2%2Findianclimberanuragmaloowhowentmissingatmountannapurnainnepalfoundalive-newsid-n491903712