ನಾನೂ ಸಿದ್ದರಾಮಯ್ಯ ಅಭಿಮಾನಿ; ಅವರು ಸಿಎಂ ಆಗುವ ಸಂದರ್ಭ ಬಂದರೆ ಬೆಂಬಲಿಸಲು ಸಿದ್ಧ ಎಂದ ಜೆಡಿಎಸ್ ಶಾಸಕ…!

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷಗಳು ನಾಯಕರು ಆರೋಪ – ಪ್ರತ್ಯಾರೋಪದಲ್ಲಿ ತೊಡಗಿದ್ದು ಕೆಲವೊಂದು ಬಾರಿ ಇದು ಅತಿರೇಕಕ್ಕೆ ಹೋಗಿದ್ದೂ ಇದೆ. ಇದರ ಮಧ್ಯೆ ಜೆಡಿಎಸ್ ಶಾಸಕರೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಹೌದು, ಸಮಾರಂಭ ಒಂದರಲ್ಲಿ ಮಾತನಾಡಿದ ವೇಳೆ ಜೆಡಿಎಸ್ ಶಾಸಕ ಕೆ. ಮಹದೇವ್, ನಾನೂ ಸಿದ್ದರಾಮಯ್ಯ ಅಭಿಮಾನಿ. ಅವರು ಮುಖ್ಯಮಂತ್ರಿಯಾಗುವ ಸಂದರ್ಭ ಬಂದ ವೇಳೆ ಬೆಂಬಲಿಸಲು ಸಿದ್ಧನಿದ್ದೇನೆ. ಇದನ್ನು ಕುರುಬ ಸಮಾಜದವರು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಎದುರಾಳಿ ಕೆ. ವೆಂಕಟೇಶ್ ಅವರನ್ನು ಟೀಕಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ವೆಂಕಟೇಶ್ ಹೆಚ್ಚಿನ ಅನುದಾನ ತಂದು ತಾಲೂಕನ್ನು ಅಭಿವೃದ್ಧಿಪಡಿಸಬಹುದಾಗಿತ್ತು. ಆದರೆ ಅವರು ಈ ಸುವರ್ಣಾವಕಾಶವನ್ನು ಕೈ ಚೆಲ್ಲಿದರು ಎಂದು ಆರೋಪಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read