ನವಿಲಿನ ಚಿತ್ರವಿರೋ 10 ರೂಪಾಯಿ ನೋಟು ನಿಮ್ಮ ಬಳಿಯಿದ್ಯಾ……? ಕ್ಷಣಾರ್ಧದಲ್ಲಿ ನೀವು ಶ್ರೀಮಂತರಾಗಬಹುದು!

ಪ್ರತಿ ದೇಶದ ಕರೆನ್ಸಿಯೂ ವಿಭಿನ್ನವಾಗಿದೆ. ಈ ಕರೆನ್ಸಿಗಳ ಸಹಾಯದಿಂದ ಯಾವುದೇ ದೇಶದಲ್ಲಿ ವಹಿವಾಟಿನ ಪ್ರಕ್ರಿಯೆಯನ್ನು ಸರಳಗೊಳಿಸಬಹುದು. ಅನೇಕ ದೇಶಗಳು ಕಾಲಕಾಲಕ್ಕೆ ತಮ್ಮ ಕರೆನ್ಸಿಯಲ್ಲಿ ಕೆಲವು ನವೀಕರಣಗಳನ್ನು ಮಾಡುತ್ತವೆ. ಭಾರತೀಯ ಕರೆನ್ಸಿಯಲ್ಲೂ ಕಾಲಕಾಲಕ್ಕೆ ಹಲವಾರು ಬಾರಿ ಇಂತಹ ಬದಲಾವಣೆಗಳಾಗಿವೆ. ಭಾರತದಲ್ಲಿ ಕೆಲವೊಂದು ಅಪರೂಪದ ನೋಟುಗಳು ಮತ್ತು ನಾಣ್ಯಗಳಿವೆ, ಅವುಗಳ ಮೌಲ್ಯವು ಮುಖಬೆಲೆಗಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ. ಅಂತಹ ಒಂದು 10 ರೂಪಾಯಿ ನೋಟಿನ ಬಗ್ಗೆ ಇಲ್ಲಿದೆ ಮಾಹಿತಿ.

ಇದು ಅತ್ಯಂತ ಹಳೆಯ 10 ರೂಪಾಯಿ ಮುಖಬೆಲೆಯ ನೋಟು. ವಿಶೇಷವೆಂದರೆ ಈ ನೋಟಿನ ಹಿಂಭಾಗದಲ್ಲಿ ನವಿಲಿನ ಆಕೃತಿಯಿದೆ. ನವಿಲಿನ ಚಿತ್ರವಿರುವ ಈ ನೋಟಿನ ಮುಖಬೆಲೆ ಕೇವಲ 10 ರೂಪಾಯಿಯಾಗಿದ್ದರೂ, ಮೌಲ್ಯ ಮಾತ್ರ ಸಾವಿರಾರು ರೂಪಾಯಿಗಳಷ್ಟಿದೆ. ಈ ನೋಟು ಮಾರುಕಟ್ಟೆಯಲ್ಲಿ ಬಹಳ ವಿರಳವಾಗಿ ಕಂಡು ಬರುತ್ತದೆ. ಈ ನೋಟು ನಿಮಗೆ ಸಿಕ್ಕಿದ್ರೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ನವಿಲಿನ ಚಿತ್ರವಿರೋ 10 ರೂಪಾಯಿಯ ನೋಟು ಇದ್ದರೆ, ಉತ್ತಮ ಆದಾಯವನ್ನು ಗಳಿಸಬಹುದು.

ನೋಟಿನ ಕ್ರಮಸಂಖ್ಯೆ ಉತ್ತಮವಾಗಿದ್ದರೆ ಅದರ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ. ಉದಾಹರಣೆಗೆ ನೋಟಿನ ಕ್ರಮಸಂಖ್ಯೆಯಲ್ಲಿ 786 ಸಂಖ್ಯೆ ಇದ್ದರೆ, ಅದರ ಮೌಲ್ಯವು ಹೆಚ್ಚಾಗುತ್ತದೆ. ಇಂತಹ ನೋಟಿನ ಬೆಲೆ 30-40 ಸಾವಿರದವರೆಗೆ ಇರುತ್ತದೆ. ನಿಮ್ಮ ಬಳಿಯೇನಾದರೂ ಈ ನೋಟು ಇದ್ದರೆ ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. Ebay, Quikr, Coinbazaar ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಈ ನೋಟುಗಳನ್ನು ಖರೀದಿಸುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read