ನಕಾರಾತ್ಮಕ ಶಕ್ತಿ ಓಡಿಸುತ್ತೆ ಈ ಒಂದು ಸಣ್ಣ ವಸ್ತು

ಮನೆಯ ಅಡುಗೆ ಮನೆಯಲ್ಲಿರುವ ಉಪ್ಪಿಗೆ ಸಾಕಷ್ಟು ಶಕ್ತಿಯಿದೆ. ಆಹಾರದ ರುಚಿ ಹೆಚ್ಚಿಸುವುದೊಂದೇ ಅಲ್ಲ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ವಿರುದ್ಧ ಹೋರಾಡಿ ಸದಾ ಸಂತೋಷ ನೆಲೆಸುವಂತೆ ಮಾಡುತ್ತದೆ. ಉಪ್ಪಿಗೆ ನಕಾರಾತ್ಮಕ ಶಕ್ತಿಗಳು ಹೆದರಿ ಓಡಿ ಹೋಗುತ್ತವೆ.

ಮನೆಯಲ್ಲಿ ಉಪ್ಪನ್ನು ಬಳಸುವಾಗ ಎಂದೂ ಉಪ್ಪು ಕೆಳಗೆ ಬೀಳದಂತೆ ನೋಡಿಕೊಳ್ಳಿ. ಇದು ಅಶುಭದ ಸಂಕೇತ.

ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಮನೆಯನ್ನು ಸ್ವಚ್ಛಗೊಳಿಸುವ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ. ಇದ್ರಿಂದ ಕೀಟಾಣುಗಳು ನಾಶವಾಗುತ್ತವೆ.

ಸ್ನಾನದ ಮನೆಯಲ್ಲಿ ಗಾಜಿನ ಬಟ್ಟಲಿನಲ್ಲಿ ಉಪ್ಪನ್ನು ಹಾಕಿ ಇಡಿ. 15 ದಿನಕ್ಕೊಮ್ಮೆ ಉಪ್ಪನ್ನು ಬದಲಾಯಿಸುತ್ತಿರಿ. ಹಾಗೆ ಟಾಯ್ಲೆಟ್ ನ ಸಿಂಕ್ ಗೆ ಉಪ್ಪನ್ನು ಹಾಕಿ.

ಉಪ್ಪೊಂದೆ ಅಲ್ಲ ಕಹಿ ಬೇವಿನ ಎಲೆಯನ್ನು ಸುಟ್ಟು ಆ ಹೊಗೆಯನ್ನು ಮನೆಗೆಲ್ಲ ತೋರಿಸಿ. ಇದ್ರಿಂದ ನಕಾರಾತ್ಮಕ ಶಕ್ತಿ ದೂರವಾಗಿ ವಾಸ್ತು ದೋಷ ಕಡಿಮೆಯಾಗುತ್ತದೆ.

ಕರ್ಪೂರ ಹಾಗೂ ಲವಂಗವನ್ನು ಸುಟ್ಟು ಆ ಹೊಗೆಯನ್ನು ಮನೆಗೆಲ್ಲ ತೋರಿಸುವುದರಿಂದ ರೋಗ ಹಾಗೂ ನಕಾರಾತ್ಮಕ ಶಕ್ತಿಯ ನಾಶವಾಗುತ್ತದೆ.

ಬೆಳಿಗ್ಗೆ ಸೂರ್ಯನ ಕಿರಣಗಳು ಮನೆಯೊಳಗೆ ಪ್ರವೇಶ ಮಾಡುವುದು ಬಹಳ ಪ್ರಯೋಜನಕಾರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read