ದೇಗುಲದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ 2 ಲಕ್ಷ ರೂ. ವಶ….!

ಚುನಾವಣೆ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಹಣ ತೆಗೆದುಕೊಂಡು ಹೋಗಬೇಕಾದರೆ ಸೂಕ್ತ ದಾಖಲೆಗಳನ್ನು ಹೊಂದಿರಬೇಕಾಗಿರುವುದು ಅತ್ಯವಶ್ಯಕ. ಒಂದೊಮ್ಮೆ ದಾಖಲೆಗಳು ಇರದಿದ್ದರೆ ವಶಪಡಿಸಿಕೊಳ್ಳಲಾಗುತ್ತದಲ್ಲದೆ ಅದನ್ನು ಹಿಂಪಡೆಯಬೇಕಾದರೆ ಸೂಕ್ತ ದಾಖಲೆ ನೀಡಬೇಕಾಗುತ್ತದೆ.‌

ಇಂಥದ್ದೇ ಒಂದು ಪ್ರಕರಣದಲ್ಲಿ ದೇಗುಲದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾದ ಎರಡು ಲಕ್ಷ ರೂಪಾಯಿ ನಗದನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ನಡೆದಿದೆ.

ತುಮಕೂರಿನ ಪಾವಗಡದಿಂದ ಡಾ. ಶಶಿಕಿರಣ್ ಎಂಬವರು ಧರ್ಮಸ್ಥಳ ಹಾಗೂ ಕಟೀಲು ದೇಗುಲ ದರ್ಶನಕ್ಕೆ ಹೊರಟಿದ್ದು, ಹುಂಡಿಗೆ ಹಾಕುವ ಸಲುವಾಗಿ 2 ಲಕ್ಷ ರೂಪಾಯಿ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನ ತಡೆದು ಪರಿಶೀಲಿಸಿದಾಗ ಇದು ಪತ್ತೆಯಾಗಿದ್ದು, ಆದರೆ ಹಣಕ್ಕೆ ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಇದನ್ನು ವಶಕ್ಕೆ ಪಡೆಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read