ದಿನವೊಂದಕ್ಕೆ ಎಷ್ಟು ಮೊಟ್ಟೆ ಸೇವಿಸಬಹುದು…? ಇಲ್ಲಿದೆ ಮಾಹಿತಿ

ದಿನಾಲೂ ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಸಾಮಾನ್ಯವಾಗಿ ತಮ್ಮ ಡಯಟ್​ನಲ್ಲಿ ಮೊಟ್ಟೆಯನ್ನ ಸೇರಿಸಿಕೊಂಡಿರ್ತಾರೆ. ಮೊಟ್ಟೆಯಲ್ಲಿರುವ ಅಗಾಧ ಪ್ರಮಾಣದ ಪೋಷಕಾಂಶಗಳು ದೇಹಕ್ಕೆ ತುಂಬಾನೇ ಒಳ್ಳೆಯದು.

ಮೊಟ್ಟೆಯಲ್ಲಿರುವ ಪ್ರೋಟಿನ್​, ವಿಟಮಿನ್​ ಬಿ 12, ವಿಟಮಿನ್​ ಡಿ ಸೇರಿದಂತೆ ವಿವಿಧ ಅಂಶಗಳು ದೇಹದ ಆರೋಗ್ಯವನ್ನ ಕಾಪಾಡುವಲ್ಲಿ ತುಂಬಾನೇ ಪ್ರಮುಖ ಪಾತ್ರ ವಹಿಸುತ್ತವೆ. ದೇಹಕ್ಕೆ ಒಳ್ಳೆಯದು ಎಂದು ದಿನಕ್ಕೆ ಮನಬಂದಷ್ಟು ಮೊಟ್ಟೆಯನ್ನ ತಿನ್ನೋದು ಕೂಡ ಒಳ್ಳೆಯದಲ್ಲ. ಹಾಗಾದ್ರೆ ದಿನಕ್ಕೆ ಎಷ್ಟು ಮೊಟ್ಟೆಯನ್ನ ನಾವು ಸೇವಿಸಬಹುದು ಅನ್ನೋದಕ್ಕೆ ಇಲ್ಲಿದೆ ಮಾಹಿತಿ.

ಮೊಟ್ಟೆಯಲ್ಲಿ ಕೆಟ್ಟ ಕೊಬ್ಬನ್ನ ಹೆಚ್ಚಿಸುವ ಅಂಶ ಕೂಡ ಇರೋದ್ರಿಂದ ನೀವು ಬೇಕಾಬಿಟ್ಟಿ ಮೊಟ್ಟೆಯನ್ನ ತಿಂದರೆ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್​​ ಮಟ್ಟ ಹೆಚ್ಚಾಗುತ್ತೆ.

ಒಂದು ಮೊಟ್ಟೆಯಲ್ಲಿ 200 ಮಿಲಿಗ್ರಾಂ ಕೊಬ್ಬಿನಾಂಶ ಇರುತ್ತೆ. ಒಂದು ದಿನಕ್ಕೆ ಇಷ್ಟೇ ಮೊಟ್ಟೆಯನ್ನ ಸೇವಿಸಬಹುದು ಅನ್ನೋದನ್ನ ನಿಖರವಾಗಿ ಹೇಳೋಕೆ ಅಸಾಧ್ಯ.

ಆದರೆ ದಿನಕ್ಕೆ ಒಂದು ಮೊಟ್ಟೆಯನ್ನ ಸೇವಿಸಬಹುದು. ಆರೋಗ್ಯವಂತ ಮನುಷ್ಯ ದಿನಕ್ಕೆ ಮೂರು ಮೊಟ್ಟೆ ಸೇವಿಸಬಹುದು. ಸಿಕ್ಕಾಪಟ್ಟೆ ಮೊಟ್ಟೆಯನ್ನ ಸೇವಿಸೋದ್ರಿಂದ ಹೊಟ್ಟೆನೋವು ಹಾಗೂ ಭೇದಿ ಶುರುವಾಗುವ ಸಾಧ್ಯತೆ ಇರುತ್ತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read