ಕಾಡುಪ್ರಾಣಿಗಳು ನಗರಕ್ಕೆ ನುಗ್ಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಕಾಡಾನೆ ದಾಳಿ, ಹುಲಿ, ಚಿರತೆ ದಾಳಿಯಿಂದ ಹಲವರು ಈಗಾಗ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅನಿರೀಕ್ಷಿತ ಅತಿಥಿಯ ಆಗಮನವಾಗಿತ್ತು.
https://twitter.com/lalitforweb/status/1623298870519418880?ref_src=twsrc%5Etfw%7Ctwcamp%5Etweetembed%7Ctwterm%5E1623298870519418880%7Ctwgr%5Ea170a4162a7465d842d7fcaccad1b58f3173ce7a%7Ctwcon%5Es1_&ref_url=https%3A%2F%2Fwww.india.com%2Futtar-pradesh%2Fleopard-enters-ghaziabad-district-court-premises-in-uttar-pradesh-several-people-injured-5889146%2F
ಕೋರ್ಟ್ ಆವರಣದೊಳಕ್ಕೆ ಹಠಾತ್ತನೆ ಚಿರತೆಯೊಂದು ನುಗ್ಗಿದೆ. ಮೂವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಚಿರತೆ ದಾಳಿಯ ವಿಡಿಯೋಗಳು ಕೂಡ ವೈರಲ್ ಆಗಿವೆ. ಚಿರತೆ ನ್ಯಾಯಾಲಯದ ಸಂಕೀರ್ಣದ ಒಳಗೆ ಬೀಡು ಬಿಟ್ಟಿತ್ತು. ಲೋಹದ ಗೇಟ್ ಹಿಂದೆ ಕುಳಿತು ಪೊಲೀಸರು, ವಕೀಲರನ್ನು ದಿಟ್ಟಿಸುತ್ತಿತ್ತು. ಅಷ್ಟಕ್ಕೇ ಸುಮ್ಮನಾಗದೇ ಅಲ್ಲಿದ್ದ ವಕೀಲರ ಮೇಲೆ ಅಟ್ಯಾಕ್ ಮಾಡಿದೆ.
ಗಾಯಗೊಂಡವರನ್ನು ಆಂಬ್ಯುಲೆನ್ಸ್ ಮೂಲಕ ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೋರ್ಟ್‌ಗೆ ಚಿರತೆ ನುಗ್ಗಿರೋ ಸುದ್ದಿ ತಿಳಿದ ಅರಣ್ಯ ಇಲಾಖೆಯ ತಂಡ ಅಲ್ಲಿಗೆ ದೌಡಾಯಿಸಿದೆ. ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸಿದೆ. ಚಿರತೆ ಜನರ ಮೇಲೆ ದಾಳಿ ಮಾಡಿರುವ ವಿಡಿಯೋಗಳು ಬೆಚ್ಚಿ ಬೀಳಿಸುವಂತಿವೆ.
https://twitter.com/PavadiaVivek/status/1623308231245467649?ref_src=twsrc%5Etfw%7Ctwcamp%5Etweetembed%7Ctwterm%5E1623308231245467649%7Ctwgr%5Ea170a4162a7465d842d7fcaccad1b58f3173ce7a%7Ctwcon%5Es1_&ref_url=https%3A%2F%2Fwww.india.com%2Futtar-pradesh%2Fleopard-enters-ghaziabad-district-court-premises-in-uttar-pradesh-several-people-injured-5889146%2F