ದಂಪತಿ ಮಧ್ಯೆ ಬರಲೇಬಾರದು ಈ ಒಂದು ಮಾತು

ದಂಪತಿ ಮಧ್ಯೆ ಗಲಾಟೆ ಸಾಮಾನ್ಯ. ಸಣ್ಣ ಜಗಳ ಕೂಡ ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತದೆ. ಗಲಾಟೆ, ಜಗಳದ ಮಧ್ಯೆ ನಾವು ಬಳಸುವ ಶಬ್ಧಗಳು ನಮ್ಮ ಸಂಬಂಧವನ್ನು ಮತ್ತಷ್ಟು ಹಾಳು ಮಾಡುತ್ತವೆ.

ಸಾಮಾನ್ಯವಾಗಿ ಕೆಲಸದ ಒತ್ತಡದಲ್ಲಿ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಮನೆಗೆ ಬೇಗ ಬರಲು ಸಾಧ್ಯವಾಗುವುದಿಲ್ಲ. ಇದು ಇಬ್ಬರ ಮಧ್ಯೆ ಜಗಳಕ್ಕೆ ಕಾರಣವಾಗುತ್ತದೆ. ಈ ವೇಳೆ ಸಂಗಾತಿ ಸೆಲ್ಫಿಶ್ ಎಂದು ಆರೋಪ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಸೆಲ್ಫಿಶ್ ಪದ ಬಳಸಬೇಡಿ. ಕೋಪದಲ್ಲಿ ಬಂದ ಪದ ದಾಂಪತ್ಯದ ಬಿರುಕಿಗೆ ಕಾರಣವಾಗಬಹುದು.

ಮದುವೆ ನಂತ್ರ ಜಗಳ ಮಾಮೂಲಿ. ಆದ್ರೆ ಕೆಲವರು ಮದುವೆಯಾಗಿದ್ದು ಜೀವನದ ದೊಡ್ಡ ತಪ್ಪು ಎಂದು ಭಾವಿಸುತ್ತಾರೆ. ಜಗಳದ ವೇಳೆ ಇದನ್ನು ಹೇಳಿ ಬಿಡ್ತಾರೆ. ಇದು ದಾಂಪತ್ಯದ ಬಿರುಕಿಗೆ ಕಾರಣವಾಗುತ್ತದೆ.

ದಂಪತಿ ಜಗಳದ ಮಧ್ಯೆ ಅವ್ರ ತಂದೆ-ತಾಯಿ ಹಾಗೂ ಸಂಬಂಧಿಕರು ಬಂದು ಹೋಗ್ತಾರೆ. ಇದು ಒಳ್ಳೆಯದಲ್ಲ. ಇದು ಗಲಾಟೆಯನ್ನು ಹೆಚ್ಚು ಮಾಡುತ್ತದೆ. ಇಬ್ಬರ ಮಧ್ಯದ ಬಿರುಕನ್ನು ಹೆಚ್ಚು ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read