ತ್ವಚೆ ಹೊಳೆಯುವಂತೆ ಮಾಡುತ್ತೆ ಮೊಟ್ಟೆ ʼಫೇಸ್ ಪ್ಯಾಕ್ʼ

ಮೊಟ್ಟೆಯಿಂದ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ನಿಮ್ಮ ತ್ವಚೆ ಹೊಳೆಯುವಂತೆ ಮಾಡಬಹುದು ಎಂಬುದು ನಿಮಗೆ ಗೊತ್ತಿರಬಹುದು. ಅದು ಹೇಗೆಂದು ತಿಳಿಯೋಣ…

ಮೊದಲು ಟೊಮೆಟೊವನ್ನು ಸ್ವಚ್ಛವಾಗಿ ತೊಳೆದು ರುಬ್ಬಿ ಅದರ ರಸವನ್ನು ಸೋಸಿ ಇಟ್ಟುಕೊಳ್ಳಿ. ಇದಕ್ಕೆ ನಿಂಬೆ ರಸ ಸೇರಿಸಿ. ಮೊಟ್ಟೆಯ ಬಿಳಿಭಾಗವನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಈ ಮಿಶ್ರಣ ಸೇರಿಸಿ. ಇದನ್ನು ಮುಖಕ್ಕೆ ಹಚ್ಚಿ. 15 ನಿಮಿಷದ ಬಳಿಕ ತಣ್ಣಗಿನ ನೀರಿನಲ್ಲಿ ಮುಖ ತೊಳೆಯಿರಿ.

ಇದರಿಂದ ನಿಮ್ಮ ಮುಖದ ಕಲೆಗಳು ದೂರವಾಗಿ ಹೊಳಪು ಪಡೆದುಕೊಳ್ಳುತ್ತದೆ. ನಿಂಬೆರಸದೊಂದಿಗೆ ಸೌತೆಕಾಯಿ ರಸ ಮತ್ತು ಗುಲಾಬಿ ನೀರು ಸೇರಿಸಿಕೊಂಡರೆ ಮೊಡವೆಗಳು ಬರುವುದಿಲ್ಲ ಮಾತ್ರವಲ್ಲ ಮುಖದ ರಂಧ್ರದಲ್ಲಿರುವ ಕೊಳೆ ದೂರವಾಗುತ್ತದೆ.

ಇದರೊಂದಿಗೆ ಜೇನುತುಪ್ಪವನ್ನು ಬಳಸಿ ಹಚ್ಚಿಕೊಂಡರೆ ಫೇಶಿಯಲ್ ಮಾಡಿಕೊಂಡ ಅನುಭವ ನಿಮ್ಮದಾಗುತ್ತದೆ. ಸತ್ತ ಜೀವಕೋಶಗಳನ್ನು ಇದು ಸುಲಭವಾಗಿ ತೆಗೆದು ಹಾಕುತ್ತದೆ.

ಅತ್ಯುತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡರಿಂದ ಮೂರು ಬಾರಿ ಹೀಗೆ ಮಾಡಿ ನೋಡಿ. ಆಕರ್ಷಕ ತ್ವಚೆ ನಿಮ್ಮದಾಗುವುದನ್ನು ನೋಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read