ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕ ಈ ಜ್ಯೂಸ್ ಗಳು

ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಇದರಿಂದ ಕೆಲವರು ಚಿಂತೆಗೆ ಒಳಗಾಗುತ್ತಾರೆ. ಅಂತಹವರು ಈ ಜ್ಯೂಸ್ ಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.

ಬೀಟ್ ರೂಟ್ ಜ್ಯೂಸ್

ಬೀಟ್ ರೂಟ್ ರಸವನ್ನು ನಿತ್ಯ ಸೇವಿಸಿದ್ದೆ ಆದರೆ ಅದು ದೇಹದಲ್ಲಿ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮೆಟಾಬಲಿಸಮ್ ಗೆ ಅನುಕೂಲಕರವಾಗಿರುತ್ತದೆ. ಹಾಗೇ ಬೀಟ್ ರೂಟ್ ನಲ್ಲಿರುವ ನೈಟ್ರೇಟ್ ದೇಹದಲ್ಲಿ ನೈಟ್ರಿಕ್ ಆಮ್ಲವಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್ ನ್ನು ದೈನಂದಿನ ಡಯಟ್ ನಲ್ಲಿ ಸೇರಿಸಿದರೆ ತೂಕ ಕಡಿಮೆಯಾಗುತ್ತದೆ. ಕ್ಯಾರೆಟ್ ಸಾಕಷ್ಟು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಪಾಲಾಕ್ ಜ್ಯೂಸ್

ಪಾಲಾಕ್ ನಲ್ಲಿ ಸಾಕಷ್ಟು ಕಬ್ಬಿಣ, ಮೆಗ್ನೀಶಿಯಮ್ ಮತ್ತು ವಿಟಮಿನ್ ಗಳು ಇವೆ. ಇದು ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read