ತಿಂಗಳ ಸಮಸ್ಯೆಗೆ ಇಲ್ಲಿದೆ ಪರಿಹಾರ

ತಿಂಗಳ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ವಿಪರೀತ ಸುಸ್ತು, ಎದೆ ಭಾರ, ಹೊಟ್ಟೆ, ಬೆನ್ನು, ಕಾಲು ನೋವು, ವಾಕರಿಕೆ, ಹಸಿವಿಲ್ಲದಿರುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಲಕ್ಷಣಗಳನ್ನು ಕೆಲವರಿಗೆ ಕೆಲವು ರೂಪದಲ್ಲಿ ಕಂಡೀತು. ಅದನ್ನು ಸುಲಭದಲ್ಲಿ ಎದುರಿಸುವ ಬಗೆ ಇಲ್ಲಿದೆ.

ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುವುದರಿಂದ ನಿಮ್ಮ ಅರ್ಧದಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ. ಜಂಕ್ ಫುಡ್ ನಿಂದ ಸಾಧ್ಯವಾದಷ್ಟು ದೂರವಿರುವುದು, ನಿತ್ಯ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು.

ಗೋಧಿ, ಓಟ್ಸ್ ಮತ್ತು ಕಂದು ಅಕ್ಕಿಯನ್ನು ಆಹಾರದಲ್ಲಿ ಬಳಸಿ. ಇವು ಮಲಬದ್ಧತೆಯನ್ನು ತಡೆಯಲು ಫೈಬರ್ ಅನ್ನು ಒದಗಿಸುತ್ತದೆ. ಕಡಿಮೆ ಕೊಬ್ಬಿನ ಹಾಲು, ಮೊಸರು, ಲಸ್ಸಿ ದಿನದ ಒಂದು ಹೊತ್ತಾದರೂ ಸೇವಿಸಿ. ದ್ವಿದಳ ಧಾನ್ಯಗಳು, ಬೀಜಗಳು ಅದರಲ್ಲೂ ಅಗಸೆ ಬೀಜವನ್ನು ಸೇವಿಸಿ. ಇದು ಸ್ರಾವವಾದ ರಕ್ತದ ನಷ್ಟವನ್ನು ಮತ್ತೆ ತುಂಬಲು ನೆರವಾಗುತ್ತದೆ. ಅದಕ್ಕೆ ಬೇಕಾದ ಪ್ರೊಟೀನ್ ಗಳನ್ನೂ ಒದಗಿಸುತ್ತದೆ.

ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ. ಅರೋಗ್ಯಕರ ಕೊಬ್ಬು ಹೆಚ್ಚಿಸುವ ಆಹಾರಕ್ಕೆ ಆದ್ಯತೆ ನೀಡಿ. ಹುರಿದ, ಕರಿದ ಆಹಾರಗಳು ಕೊಬ್ಬನ್ನು ಮಾತ್ರ ಹೆಚ್ಚಿಸುತ್ತವೆ. ತೆಂಗಿನಕಾಯಿ ನೀರು ಎಸೆಯದೆ ಕುಡಿಯಿರಿ. ಅಗಾಗ ನಿಂಬೆ ರಸದ ಜ್ಯೂಸ್ ತಯಾರಿಸಿ ಕುಡಿಯುತ್ತಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read