ತಲೆನೋವು ಬಂದಾಕ್ಷಣ ಮಾತ್ರೆ ನುಂಗಬೇಡಿ; ಈ ಮನೆಮದ್ದುಗಳಿಂದ ಸಿಗುತ್ತೆ ತಕ್ಷಣ ಪರಿಹಾರ….!

ತಲೆನೋವು ಯಾವುದೇ ವ್ಯಕ್ತಿಗೆ ಸಂಭವಿಸಬಹುದಾದ ಸಾಮಾನ್ಯ ಸಮಸ್ಯೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿರುವುದರಿಂದ ಕೆಮ್ಮು, ನೆಗಡಿ, ತಲೆನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.

ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಜನರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಸಣ್ಣಪುಟ್ಟ ತಲೆನೋವಿಗೆಲ್ಲ ಮಾತ್ರೆ ನುಂಗುವ ಬದಲು ಮನೆಮದ್ದುಗಳನ್ನು ಪ್ರಯತ್ನಿಸಿ. ಕೆಲವೇ ನಿಮಿಷಗಳಲ್ಲಿ ಇವು ತಲೆನೋವಿನಿಂದ ರಿಲೀಫ್‌ ನೀಡತ್ತವೆ.

ತುಳಸಿ : ತುಳಸಿ ಎಲೆಗಳನ್ನು ಸೇವಿಸುವುದರಿಂದ ಮನಸ್ಸು ರಿಲ್ಯಾಕ್ಸ್‌ ಆಗುತ್ತದೆ. ಮೂರ್ನಾಲ್ಕು ತುಳಸಿ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಸ್ವಲ್ಪ ಹೊತ್ತು ಕುದಿಸಿ. ಇದಕ್ಕೆ ಸ್ವಲ್ಪ ಜೇನು ಸೇರಿಸಿ ನಂತರ ಚಹಾದಂತೆ ಕುಡಿಯಿರಿ. ಇನ್ನೊಂದು ಪರಿಹಾರವೆಂದರೆ ತುಳಸಿ ಎಲೆಗಳನ್ನು ಜಗಿಯುವುದು.

ಬಿಸಿ ನೀರು ಮತ್ತು ನಿಂಬೆ ರಸ: ತಲೆನೋವಿಗೆ ಇದು ಅತ್ಯಂತ ಪರಿಣಾಮಕಾರಿ ಪರಿಹಾರ. ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯಿರಿ. ತಲೆನೋವು ಕೆಲವೇ ನಿಮಿಷಗಳಲ್ಲಿ ಮಾಯವಾಗುತ್ತದೆ. ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್‌ನಿಂದಾಗಿಯೂ ತಲೆನೋವು ಬರುತ್ತದೆ. ಈ ಸಂದರ್ಭದಲ್ಲಿ ಮನೆಮದ್ದು ಬಹಳ ಪರಿಣಾಮಕಾರಿ.

ಶುಂಠಿ: ತಲೆಯಲ್ಲಿರುವ ರಕ್ತನಾಳಗಳ ಊತವನ್ನು ಕಡಿಮೆ ಮಾಡಲು ಶುಂಠಿ ಸಹಾಯ ಮಾಡುತ್ತದೆ. ಇದರ ಬಳಕೆಯಿಂದ ತಲೆನೋವು ಕಡಿಮೆಯಾಗುತ್ತದೆ. ಇದಕ್ಕಾಗಿ ಶುಂಠಿ ರಸ ಮತ್ತು ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ, ದಿನಕ್ಕೆ ಒಮ್ಮೆ ಅಥವಾ ಎರಡು ಬಾರಿ ಕುಡಿಯಿರಿ. ಇದಲ್ಲದೆ ಶುಂಠಿ ಪುಡಿ ಅಥವಾ ಹಸಿ ಶುಂಠಿಯನ್ನು ನೀರಿನಲ್ಲಿ ಕುದಿಸಿ ಆ ಹಬೆಯನ್ನು ತೆಗೆದುಕೊಳ್ಳುವುದರಿಂದಲೂ ರಿಲೀಫ್‌ ಸಿಗುತ್ತದೆ.

ಪುದೀನಾ: ಪುದೀನಾ ಜ್ಯೂಸ್ ಕೂಡ ತಲೆನೋವಿಗೆ ತುಂಬಾ ಪ್ರಯೋಜನಕಾರಿ. ಪುದಿನಾದಲ್ಲಿ ಕಂಡುಬರುವ ಮೆಂಥೋನ್ ಮತ್ತು ಮೆಂಥಾಲ್ ಅಂಶವು ತಲೆನೋವಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಕೆಲವು ಪುದೀನಾ ಎಲೆಗಳನ್ನು ತೆಗೆದುಕೊಂಡು ಅದರ ರಸವನ್ನು ಹಣೆಯ ಮೇಲೆ ಹಚ್ಚಬೇಕು. ಇದರಿಂದ ಕೆಲವೇ ನಿಮಿಷಗಳಲ್ಲಿ ತಲೆನೋವು ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read