 ದಿನಾ ಒಂದೇ ರೀತಿ ಸಾಂಬಾರ್ ಪಲ್ಯ ತಿಂದು ಬೋರಾಗಿದ್ದರೆ, ಈ ಹೊಸ ರೀತಿ ಸಾಗು ತಯಾರಿಸಿ ಟೇಸ್ಟ್ ಮಾಡಿ. ಅನ್ನ, ರೊಟ್ಟಿ, ಚಪಾತಿ ಜೊತೆ ಇದನ್ನು ಸವಿದರೆ ರುಚಿಯಾಗಿರುತ್ತದೆ. ಇದನ್ನು ಮಾಡುವ ವಿಧಾನ ಇಲ್ಲಿದೆ.
ದಿನಾ ಒಂದೇ ರೀತಿ ಸಾಂಬಾರ್ ಪಲ್ಯ ತಿಂದು ಬೋರಾಗಿದ್ದರೆ, ಈ ಹೊಸ ರೀತಿ ಸಾಗು ತಯಾರಿಸಿ ಟೇಸ್ಟ್ ಮಾಡಿ. ಅನ್ನ, ರೊಟ್ಟಿ, ಚಪಾತಿ ಜೊತೆ ಇದನ್ನು ಸವಿದರೆ ರುಚಿಯಾಗಿರುತ್ತದೆ. ಇದನ್ನು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಹೆಚ್ಚಿದ ಹುರುಳಿಕಾಯಿ, ಕ್ಯಾರೆಟ್, ಸೀಮೆಬದನೆಕಾಯಿ 1 ಬಟ್ಟಲು
 ಅವರೆಕಾಳು, ಹಸಿ ಬಟಾಣಿ ಕಾಳು, ಹಸಿ ತೊಗರಿ ಕಾಳು, ಹಸಿಕಡಲೆಕಾಳು, ಹಸಿ ಕಡಲೆಕಾಯಿ ಬೀಜ ಎಲ್ಲಾ ಸೇರಿ 1 ದೊಡ್ಡ ಬಟ್ಟಲು
 ಮರಾಠಿ ಮೊಗ್ಗು 1
 ದಾಲ್ಚಿನ್ನಿ 1 ಚಿಕ್ಕ ತುಂಡು
 ಅನಾನಸ್ ಹೂವು ಅರ್ಧ
 ಧನಿಯಾ ಬೀಜ 1 ಚಮಚ
 ಜೀರಿಗೆ 1/2 ಚಮಚ
 ತೆಂಗಿನ ತುರಿ 1 ಕಪ್
 ಹುರಿಗಡಲೆ 1 ಹಿಡಿ
 ಹಸಿಮೆಣಸಿನಕಾಯಿ 6
 ಕೊತ್ತಂಬರಿ ಸೊಪ್ಪು ಸ್ವಲ್ಪ
 ಒಗ್ಗರಣೆಗೆ ಇಂಗು, ಕರಿಬೇವು
 ನಿಂಬೆ ರಸ ಸ್ವಲ್ಪ
 ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮರಾಠಿ ಮೊಗ್ಗು, ದಾಲ್ಚಿನ್ನಿ, ಅನಾನಸ್ ಹೂವು, ಧನಿಯಾ ಬೀಜ, ಜೀರಿಗೆಯನ್ನು ಹುರಿದು ಪುಡಿ ಮಾಡಿರಿ. ತೆಂಗಿನತುರಿ, ಹುರಿಗಡಲೆ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪುಗಳನ್ನು ಒಟ್ಟಿಗೆ ರುಬ್ಬಿ.
ಸಣ್ಣ ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿ ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ನಂತರ ಇದಕ್ಕೆ ತರಕಾರಿ ಮತ್ತು ಕಾಳುಗಳನ್ನು ಹಾಕಿ ಸ್ವಲ್ಪ ಬಾಡಿಸಿ ಒಂದು ವಿಶಲ್ ಕೂಗಿಸಿ.
ಆಮೇಲೆ ಇದಕ್ಕೆ ರುಬ್ಬಿದ ಮಸಾಲೆ, ಒಣ ಮಸಾಲೆ ಪುಡಿ, ಉಪ್ಪು ಮತ್ತು ಒಂದು ಲೋಟ ನೀರು ಹಾಕಿ ಸಾಗು ಹದಕ್ಕೆ ಬರುವಷ್ಟು ಕುದಿಸಿ ನಿಂಬೆರಸ ಹಾಕಿ. ಈಗ ಸಾಗು ಸವಿಯಲು ಸಿದ್ಧ.

 
		 
		 
		 
		 Loading ...
 Loading ... 
		 
		 
		