ತಂದೆಯನ್ನೇ ವನವಾಸಕ್ಕೆ ಕಳಿಸಿದ ರಾಮಭಕ್ತರು ನಮ್ಮಲ್ಲಿದ್ದಾರೆ; ಯಡಿಯೂರಪ್ಪ ಪುತ್ರರನ್ನು ಕುಟುಕಿದ ಆಯನೂರು ಮಂಜುನಾಥ್

ತಂದೆಯನ್ನೇ ವನವಾಸಕ್ಕೆ ಕಳಿಸಿದ ರಾಮಭಕ್ತರು ನಮ್ಮಲ್ಲಿದ್ದಾರೆ ಎಂದು ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಅವರ ಹೆಸರು ಹೇಳದೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶ್ರೀರಾಮ ಎಲ್ಲರ ದೇವರು ಆತ ಎಲ್ಲರನ್ನು ಕಾಪಾಡುತ್ತಾನೆ. ರಾಮನ ಭಕ್ತರೆಂದು ಹೇಳಿಕೊಳ್ಳುವ ಕೆಲವರು ಶ್ರೀರಾಮನನ್ನೇ ದೂರವಿಡುತ್ತಾರೆ. ಆ ಶ್ರೀರಾಮ ತಂದೆ ದಶರಥನ ಮಾತಿಗಾಗಿ ವನವಾಸ ಮಾಡಿದರು. ಆದರೆ ಈ ರಾಮಭಕ್ತರು ದಶರಥನನ್ನೇ(ಯಡಿಯೂರಪ್ಪ)ವನವಾಸಕ್ಕೆ ಕಳಿಸಿದ್ದಾರೆ ಇದು ವಿಪರ್ಯಾಸ ಎಂದರು.

ಶ್ರೀರಾಮನ ಭಕ್ತರು ಎಲ್ಲ ಹಿಂದುಗಳು ಆಗಿದ್ದಾರೆ. ಆತನನ್ನು ಬೀದಿಗೆ ತಂದು ಚುನಾವಣೆಗೆ ಬಳಸಿಕೊಳ್ಳುವ ಅಗತ್ಯವೇ ಇಲ್ಲ. ಬಿಜೆಪಿಯವರು ಶ್ರೀರಾಮನಿಗಾಗಿ ಆಯೋಧ್ಯೆಯಲ್ಲಿ ಮಂದಿರ ಕಟ್ಟಿದ್ದೇವೆ ಎನ್ನುತ್ತಾರೆ. ಆದರೆ ಆ ಮಂದಿರ ಕಟ್ಟಲು ಈ ದೇಶದ ಕೋಟ್ಯಾಂತರ ಜನರು ಹಣ ಕೊಟ್ಟಿದ್ದಾರೆ. ಅದು ಬಿಜೆಪಿಯವರು ಕಟ್ಟಿದ್ದಲ್ಲ, ಭಕ್ತರು ಕೊಟ್ಟ ಹಣ ಎಂದರು.

ಆಯೋಧ್ಯೆಯ ಶ್ರೀರಾಮಮಂದಿರಕ್ಕಾಗಿ ಇಡೀ ದೇಶದ ಜನ ಇಟ್ಟಿಗೆ ಕಬ್ಬಿಣ ಕೊಟ್ಟಿದ್ದರು. ಈಗ ಆ ದೇವಾಲಯ ಕಾಂಕ್ರಿಟ್ ಕಲ್ಲಿನಿಂದ ಆಗಿದೆ. ಇಡೀ ದೇಶದಿಂದ ತೆಗೆದುಕೊಂಡು ಹೋಗಿದ್ದ ಇಟ್ಟಿಗೆ, ಕಬ್ಬಿಣ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ರಾಜಕೀಯ ದ್ವೇಷವನ್ನೇ ಸಾಧಿಸುತ್ತಿದೆ. ಬರಗಾಲದ ಇಂತಹ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಸೇರಿದಂತೆ ಯಾವ ಸಂಸದರು ಕೇಂದ್ರದಿಂದ ಅನುದಾನವನ್ನು ತರುವ ಮಾತನಾಡಲಿಲ್ಲ. ಒಂದು ರೀತಿಯಲ್ಲಿ ರಾಜ್ಯದ ಮೇಲೆ ಕೇಂದ್ರದ ದಬ್ಬಾಳಿಕೆ ನಡೆಸುತ್ತಿದೆ ಎಂದರು.

ಕಷ್ಟ ಕಾಲದಲ್ಲಿಯೂ ನೆರವಾಗದ ಕೇಂದ್ರದ ನಾಯಕರಾದ ಮೋದಿ, ಅಮಿತ್‌ಷಾ ಮುಂತಾದವರು ರಾಜ್ಯಕ್ಕೆ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯವೊಂದು ನ್ಯಾಯಾಲಯದ ಮೆಟ್ಟಿಲೆರಿರುವುದು ಇದೇ ಪ್ರಥಮವಾಗಿದೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read