ಡಾರ್ಕ್ ಸರ್ಕಲ್ ಸಮಸ್ಯೆ ದೂರವಾಗಿಸುತ್ತೆ ಈ ಉಪಾಯ

ಕಣ್ಣಿನ ಕಪ್ಪು ವರ್ತುಲಗಳಿಂದ ಮುಕ್ತಿ ಪಡೆಯಲು ಹಲವು ಪ್ರಯೋಗಗಳನ್ನು ಮಾಡಿ ಸೋತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ. ಇವುಗಳನ್ನು ದೂರ ಮಾಡುವ ಸುಲಭ ಉಪಾಯಗಳು ಇಲ್ಲಿವೆ.

ಟೊಮೆಟೊ ಹಾಗು ನಿಂಬೆ ಹಣ್ಣಿನ ರಸದ ಮಾಸ್ಕ್ ನಿಮ್ಮ ಡಾರ್ಕ್ ಸರ್ಕಲ್ ಅನ್ನು ಬಹುಬೇಗ ದೂರ ಮಾಡುತ್ತದೆ.

ಟೊಮೆಟೊ ಹಣ್ಣಿನ ರಸ ಹಿಂಡಿ ತೆಗೆಯಿರಿ. ನಿಂಬೆರಸಕ್ಕೆ ಬೆರೆಸಿ. ಈ ಮಿಶ್ರಣವನ್ನು ಕಣ್ಣಿನ ಕೆಳಭಾಗ ಹಾಗೂ ಮೇಲ್ಭಾಗಕ್ಕೆ ಹಚ್ಚಿ.

ಒಂದು ಗಂಟೆ ಹೊತ್ತು ಕಣ್ಣು ಮುಚ್ಚಿ ಮಲಗಿ. ಮಧ್ಯೆ ಮಧ್ಯೆ ಅದು ಒಣಗಿದಾಕ್ಷಣ ಮತ್ತೆ ಹಚ್ಚಿಕೊಳ್ಳಿ. ಬಳಿಕ ತಂಪಾದ ನೀರಿನಿಂದ ಕಣ್ಣನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ವಾರದೊಳಗೆ ಡಾರ್ಕ್ ಸರ್ಕಲ್ ಸಮಸ್ಯೆ ದೂರವಾಗಿರುತ್ತದೆ.

ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಅರಶಿನವನ್ನು ಇದೇ ರೀತಿ ಬಳಸಬಹುದು. ಇದಕ್ಕೆ ಪೈನಾಪಲ್ ರಸ ಬೆರೆಸಿ ಪೇಸ್ಟ್ ತಯಾರಿಸಿ. ಕಣ್ಣಿನ ಕೆಳಭಾಗಕ್ಕೆ ಹಾಗೂ ಸುತ್ತಲೂ ಹಚ್ಚಿ. ಅರ್ಧ ಗಂಟೆ ಬಳಿಕ ತೊಳೆಯಿರಿ. ಇದರ ಪರಿಣಾಮ ನಿಮಗೆ ಒಂದೆರಡು ದಿನಗಳಲ್ಲೇ ಗೋಚರಿಸುತ್ತದೆ. ಆದರೆ ನೆನಪಿರಲಿ, ಈ ದ್ರಾವಣಗಳು ಕಣ್ಣಿನೊಳಗೆ ಬೀಳದಂತೆ ಎಚ್ಚರ ವಹಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read