ಟಿಕೆಟ್ ಹಂಚಿಕೆಗೂ ಶುರುವಾಯ್ತು ಪಣ….! ತಲಾ ಒಂದು ಎಕರೆ ಜಿದ್ದಿಗೆ ಇಟ್ಟ ರೈತರು

Promote natural farming for 'atmanirbharta' in agriculture: Lessons from  Gujaratಚುನಾವಣೆಯಾಗಲಿ ಅಥವಾ ಕ್ರೀಡೆಯಾಗಲಿ ಗೆಲುವಿಗೆ ಸಂಬಂಧಿಸಿದಂತೆ ಪಣ ಕಟ್ಟುವುದು ಸಾಮಾನ್ಯ. ಆದರೆ ಈಗ ರೈತರಿಬ್ಬರು ಟಿಕೆಟ್ ಯಾರಿಗೆ ಸಿಗುತ್ತದೆ ಎಂಬ ವಿಚಾರವಾಗಿಯೂ ತಲಾ ಒಂದು ಎಕರೆ ಜಮೀನನ್ನು ಜಿದ್ದಿಗೆ ಇಟ್ಟು ಸುದ್ದಿಯಾಗಿದ್ದಾರೆ.

ಹೌದು, ಇಂತಹದೊಂದು ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ನಡೆದಿದ್ದು, ಈ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯಲು ಮಾಜಿ ಶಾಸಕರುಗಳಾದ ಡಾ. ವಿಶ್ವನಾಥ ಪಾಟೀಲ ಹಾಗೂ ಜಗದೀಶ ಮೆಟಗುಡ್ಡ ಪೈಪೋಟಿ ನಡೆಸಿದ್ದು ಟಿಕೆಟ್ ಯಾರಿಗೆ ಎಂಬುದು ಇನ್ನೂ ಘೋಷಣೆಯಾಗಿಲ್ಲ.

ಇದರ ಮಧ್ಯೆ ಹಾರೋಗೊಪ್ಪ ಗ್ರಾಮದ ರೈತರೊಬ್ಬರು ಬೈಲಹೊಂಗಲ ಕ್ಷೇತ್ರದ ಟಿಕೆಟ್ ಡಾ. ವಿಶ್ವನಾಥ್ ಪಾಟೀಲ ಅವರಿಗೇ ಸಿಗುತ್ತದೆ ಎಂದು ತಮ್ಮ ಒಂದು ಎಕರೆ ಹೊಲವನ್ನು ಜಿದ್ದಿಗೆ ಇಟ್ಟಿದ್ದರೆ ಇದೇ ಗ್ರಾಮದ ಮತ್ತೊಬ್ಬ ರೈತ ಕೂಡ ಜಗದೀಶ ಮೆಟಗುಡ್ಡ ಪರ ಒಂದು ಎಕರೆ ಹೊಲ ಜಿದ್ದಿಗೆ ಇಟ್ಟಿದ್ದಾರೆ. ಟಿಕೆಟ್ ಘೋಷಣೆಯಾದ ಬಳಿಕ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read