ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಬೊಮ್ಮಾಯಿ ವಿರುದ್ದ ಬಿಜೆಪಿ ಶಾಸಕ ಕಿಡಿ; ಜನಬೆಂಬಲವಿಲ್ಲದ ಕಾರಣಕ್ಕೆ ಚಿತ್ರ ನಟ – ನಟಿಯರನ್ನು ಕರೆಸುತ್ತಿದ್ದಾರೆಂದು ನೆಹರು ಓಲೇಕರ್ ಟಾಂಗ್

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಾವೇರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಇದರಿಂದ ಸಿಡಿದೆದ್ದಿರುವ ನೆಹರು ಓಲೇಕರ್ ಈಗ ಬಿಜೆಪಿ ತೊರೆಯಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿರುವ ಅವರು, ಬೊಮ್ಮಾಯಿ ನನ್ನ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾನೆ. 2018 ರಲ್ಲೂ ಟಿಕೆಟ್ ತಪ್ಪಿಸಲು ಪ್ರಯತ್ನ ಮಾಡಿದ್ದ ಎಂದರು.

ಹೀಗಾಗಿ ಆ ಸಂದರ್ಭದಲ್ಲಿ ನನಗೆ ಕೊನೆ ಕ್ಷಣದಲ್ಲಿ ಬಿ ಫಾರಂ ಬಂತು. ಆತನಿಗೆ ಸರಿಸಮನಾಗಿ ನಾನು ಬೆಳೆಯುತ್ತಿದ್ದೇನೆ ಎಂಬ ಕಾರಣಕ್ಕೆ ಈಗ ಟಿಕೆಟ್ ತಪ್ಪಿಸಿದ್ದಾನೆ. ಆತನಿಗೆ ಜನಬೆಂಬಲವಿಲ್ಲ. ಈ ಕಾರಣಕ್ಕಾಗಿಯೇ ಚಿತ್ರ ನಟ – ನಟಿಯರನ್ನು ಕರೆಸುತ್ತಿದ್ದಾನೆ ಎಂದು ಟಾಂಗ್ ನೀಡಿದ್ದಾರೆ.

ಬಿಜೆಪಿ ತೊರೆಯಲಿರುವ ನೆಹರು ಓಲೇಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜೆಡಿಎಸ್ ಸೇರ್ಪಡೆಯಾಗಿ ಹಾವೇರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read