ಜ್ವರ ಮತ್ತು ಕೆಮ್ಮು ಸಮಸ್ಯೆಗಳಿಗೆ ರಾಮಬಾಣ ಕಾಮ ಕಸ್ತೂರಿ

ಸುಗಂಧ ಭರಿತ ಔಷಧಿಗಳಲ್ಲಿ ಕಾಮ ಕಸ್ತೂರಿ ಗಿಡವು ಕೂಡ ಒಂದು. ತುಳಸಿಯನ್ನೇ ಹೋಲುವ ಇದನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಬಳಸುತ್ತಿದ್ದರು. ಇದರ ಬೀಜಗಳನ್ನು ಹೆಚ್ಚಾಗಿ ಔಷಧಿಯ ರೂಪದಲ್ಲಿ ಬಳಸುತ್ತಾರೆ.

ಸುವಾಸನೆಯನ್ನು ಹೊಂದಿರುವ ಕಾಮ ಕಸ್ತೂರಿ ಬೀಜವು ಕೊಬ್ಬು, ಕಬ್ಬಿಣ ಮತ್ತು ನಾರಿನ ಅಂಶವನ್ನು ಹೊಂದಿರುವ ಚಿಕ್ಕ ಸಸಿಯಾಗಿದೆ.

ಕಾಮ ಕಸ್ತೂರಿ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಶೀತ ಮತ್ತು ಜ್ವರ ನಿಯಂತ್ರಣಕ್ಕೆ ಬರುತ್ತದೆ. ಒಂದು ಟೀ ಚಮಚ ಕಸ್ತೂರಿ ಬೀಜವನ್ನು ಒಂದು ಲೋಟದಲ್ಲಿ ನೆನೆ ಹಾಕಿ, ಬೆಳಿಗ್ಗೆ ಈ ಬೀಜಗಳು ಲೋಳೆಸರದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ದೇಹವು ತಂಪಾಗಿರುತ್ತದೆ.

ಕಾಮ ಕಸ್ತೂರಿ ಎಲೆಗಳ ರಸವನ್ನು ನೀರಿಗೆ ಸೇರಿಸಿ ನಿಯಮಿತವಾಗಿ ಸ್ನಾನ ಮಾಡುವುದರಿಂದ ದೇಹದ ದುರ್ವಾಸನೆ ನಿವಾರಣೆ ಆಗುತ್ತದೆ.

ಇನ್ನು ಕಾಮ ಕಸ್ತೂರಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ನೆಕ್ಕುವುದರಿಂದ ಗಂಟಲು ಬೇನೆ ಮಾಯವಾಗುತ್ತದೆ. ನೆಗಡಿ, ಜ್ವರ ಮತ್ತು ಕೆಮ್ಮು ಈ ಸಮಸ್ಯೆಗಳಿಗೆ ಕಾಮ ಕಸ್ತೂರಿ ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read