ಜ್ಯೋತಿಷ್ಯದ ಪ್ರಕಾರ ಯಾವ ದಿನ ಯಾವ ಬೇಳೆ ಸೇವನೆ ಒಳ್ಳೆಯದು….?

ಭಾರತೀಯರು ಬೇಳೆಕಾಳುಗಳ ಬಳಕೆಯನ್ನು ಹೆಚ್ಚಾಗಿ ಮಾಡ್ತಾರೆ. ಉಪಹಾರ, ಭೋಜನಕ್ಕೆ ಬೇರೆ ಬೇರೆ ಬೇಳೆಗಳಿಂದ ರುಚಿ-ರುಚಿ ಪದಾರ್ಥ ಮಾಡಿ ಸೇವನೆ ಮಾಡ್ತಾರೆ.

ಬೇಳೆ-ಕಾಳುಗಳಲ್ಲಿ ಜೀವಸತ್ವ, ಕಬ್ಬಿಣ ಸೇರಿದಂತೆ ಪೌಷ್ಠಿಕಾಂಶ ಹೆಚ್ಚಾಗಿರುವುದರಿಂದ ಇದನ್ನು ಹೆಚ್ಚೆಚ್ಚು ಬಳಸಲಾಗುತ್ತದೆ. ಆದ್ರೆ ಎಲ್ಲ ದಿನ ಎಲ್ಲ ಧಾನ್ಯಗಳ ಸೇವನೆ ಒಳ್ಳೆಯದಲ್ಲ. ಶಾಸ್ತ್ರಗಳ ಪ್ರಕಾರ ಗ್ರಹಗಳಿಗೆ ತಕ್ಕಂತೆ ಬೇಳೆ-ಕಾಳುಗಳನ್ನು ಸೇವನೆ ಮಾಡಬೇಕು.

ಸೋಮವಾರ ತೊಗರಿ ಬೇಳೆ ಅಥವಾ ಉದ್ದಿನ ಬೇಳೆ ಸೇವನೆ ಮಾಡುವುದರಿಂದ ಆರೋಗ್ಯವಂತ ವ್ಯಕ್ತಿಯಾಗಬಹುದು. ಸರ್ವ ರೋಗಗಳಿಗೂ ಈ ಬೇಳೆ ಮದ್ದು.

ಮಂಗಳವಾರ ಮಸೂರ್ ದಾಲ್ ಉಪಯೋಗ ಮಾಡಬೇಕು. ಇದು ಸಕಾರಾತ್ಮಕ ಪ್ರಭಾವ ಬೀರುತ್ತದೆ.

ಬುಧವಾರ ಹೆಸರು ಬೇಳೆ ಅದ್ರಲ್ಲೂ ವಿಶೇಷವಾಗಿ ಸಿಪ್ಪೆ ಇರುವ ಹೆಸರು ಬೇಳೆ ಸೇವನೆ ಮಾಡಬೇಕು.

ಗುರುವಾರ ಕಡಲೆ ಬೇಳೆ ಸೇವನೆ ಮಾಡುವುದು ಒಳಿತು.

ಶುಕ್ರವಾರ ಹೆಸರು ಬೇಳೆ ತಿನ್ನುವುದು ಒಳ್ಳೆಯದು ಎನ್ನುತ್ತದೆ ಶಾಸ್ತ್ರ. ಆದ್ರೆ ತೊಗರಿ ಬೇಳೆಯನ್ನು ಸೇವಿಸಬಾರದು.

ಶನಿವಾರ ಕಪ್ಪು ಮಸೂರ್ ದಾಲ್ ಮತ್ತು ಅವರೆಕಾಳು ಸೇವನೆ ಮಾಡಬೇಕು.

ಭಾನುವಾರ ತೊಗರಿಬೇಳೆ ಹಾಗೂ ಹೆಸರು ಬೇಳೆ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಈ ದಿನ ಮಸೂರ್ ದಾಲ್, ಶುಂಠಿಯನ್ನು ತ್ಯಜಿಸಬೇಕೆಂದು ಜ್ಯೋತಿಷ್ಯ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read