ಜೀವನದಲ್ಲಿ ಏಳಿಗೆ ಕಾಣಲು ವಿಷ್ಣುವಿನ ದೇವಾಲಯಕ್ಕೆ ಹೋದಾಗ ತಪ್ಪದೇ ಈ ಮೂರು ನಿಯಮ ಪಾಲಿಸಿ

ವಿಷ್ಣು ಲೋಕದ ಸಂಚಾರಕ. ಇಡೀ ಲೋಕದ ಜನರನ್ನು ರಕ್ಷಿಸುವ ಹೊಣೆ ಆತನದು. ಹಾಗಾಗಿ ಆತ ಜನರ ರಕ್ಷಣೆಗಾಗಿ ಆಗಾಗ ಅವತಾರವೆತ್ತಿ ಬರುತ್ತಾನೆ ಎಂದು ಹೇಳುತ್ತಾರೆ. ಹಾಗಾಗಿ ನೀವು ವಿಷ್ಣುವಿನ ಅವತಾರದ ಯಾವುದೇ ದೇವಾಲಯಕ್ಕೆ ಹೋದಾಗ ತಪ್ಪದೇ ಈ ಮೂರು ನಿಯಮ ಪಾಲಿಸಿದರೆ ನಿಮ್ಮ ಜೀವನದಲ್ಲಿ ಏಳಿಗೆಯಾಗುವುದು.

*ವಿಷ್ಣುವಿನ ದೇವಾಲಯಕ್ಕೆ ಹೋದಾಗ ಮೊದಲಿಗೆ ನೀವು ಸ್ವಾಮಿಯ ಹಣೆಗೆ ಹಚ್ಚಿದ ನಾಮವನ್ನು ನೋಡಬೇಕು. ಯಾಕೆಂದರೆ ದೇವರ ನಾಮದಲ್ಲಿ ಆತನ ಶಕ್ತಿ ಅಡಗಿರುತ್ತದೆ. ಬಳಿಕ ದೇವರ ದರ್ಶನ ಮಾಡಿ.

*ವಿಷ್ಣುವಿನ ದೇವಸ್ಥಾನಗಳಿಗೆ ತುಳಸಿಯನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ತುಳಸಿ ನಿಮಗೆ ಪ್ರಸಾದದ ರೂಪದಲ್ಲಿ ಸಿಕ್ಕರೆ ಅದನ್ನು ನೀವು ಮನೆಗೆ ತಂದು ಇಟ್ಟರೆ ಮನೆಯಲ್ಲಿರುವ ನಕರಾತ್ಮಕ ಶಕ್ತಿ ದೂರವಾಗುತ್ತದೆ. ಹಾಗೇ ಅದು ಒಣಗಿದ ಬಳಿಕ ಹರಿಯುವ ನೀರಿನಲ್ಲಿ ಹಾಕಬೇಕು.

*ವಿಷ್ಣುವಿನ ದೇವಾಲಯದಲ್ಲಿ ವಿಷ್ಣುವಿನ ವಾಹನವಾದ ಗರುಡನ ಸ್ತಂಭ ಇರುತ್ತದೆ. ನೀವು ದೇವರ ದರ್ಶನ ಮಾಡಿದ ಬಳಿಕ ಗರುಡ ಸ್ತಂಭದ ದರ್ಶನ ಮಾಡಬೇಕು. ಇಲ್ಲವಾದರೆ ನಿಮಗೆ ಪೂಜೆಯ ಸಂಪೂರ್ಣ ಫಲ ಸಿಗುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read