ಜಿಮ್‌ನಲ್ಲಿ ವರ್ಕೌಟ್‌ ಮಾಡಿದ ತಕ್ಷಣ ನೀರು ಕುಡಿಯಬೇಕೇ ಅಥವಾ ಬೇಡವೇ ? ಇಲ್ಲಿದೆ ತಜ್ಞರ ಸಲಹೆ

ನೀರನ್ನು ಜೀವಜಲವೆಂದೇ ಕರೆಯಲಾಗುತ್ತದೆ. ನಾವು ಬದುಕಬೇಕೆಂದರೆ ನೀರು ಬೇಕೇ ಬೇಕು. ದೇಹದಲ್ಲಿ ನೀರಿನ ಕೊರತೆ ಇದ್ದರೆ ತಲೆನೋವು, ಮೈಕೈ ನೋವು, ದೌರ್ಬಲ್ಯ ಮತ್ತು ಉರಿ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 8 ರಿಂದ 10 ಗ್ಲಾಸ್ ನೀರನ್ನು ಕುಡಿಯಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು.

ಜಿಮ್‌ನಲ್ಲಿ ವ್ಯಾಯಾಮ ಮಾಡಿದ ತಕ್ಷಣ ನೀರು ಕುಡಿಯಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿ ಕಾಡುತ್ತದೆ. ಜಿಮ್‌ನಲ್ಲಿ ಬೆವರು ಸುರಿಸಿದಾಗ ಬಾಯಾರಿಕೆ ಸಹಜ. ನೀರು ಕುಡಿಯಬೇಕು ಎಂದು ಅನಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.

ವ್ಯಾಯಾಮ ಮಾಡಿ ವಿರಮಿಸಿದಾಗ ಮಾತ್ರ ನೀರು ಕುಡಿಯುತ್ತೀರಿ, ಅದು ಕೂಡ ಹೃದಯ ಬಡಿತ ಸಾಮಾನ್ಯವಾದಾಗ. ಆಯುರ್ವೇದದ ಪ್ರಕಾರ ನೀರನ್ನು ಒಮ್ಮೆಗೇ ನುಂಗುವುದನ್ನು ತಪ್ಪಿಸಬೇಕು. ನಿಧಾನವಾಗಿ ಸಣ್ಣ ಸಿಪ್ಸ್ ತೆಗೆದುಕೊಳ್ಳಿ.

ಜಿಮ್ ಮುಗಿದ ತಕ್ಷಣ ನೀರು ಕುಡಿಯುವುದು ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ?

ಜಿಮ್ ಮುಗಿದ ತಕ್ಷಣ ನಮ್ಮ ದೇಹವು ಕಾದ ಗ್ರಿಡಲ್‌ನಂತಿರುತ್ತದೆ. ತಕ್ಷಣ ಅದರ ಮೇಲೆ ನೀರು ಸುರಿದರೆ ಹಾನಿ ಸಂಭವಿಸುವುದು ಖಚಿತ. ವ್ಯಾಯಾಮದ ನಂತರ ತಕ್ಷಣ ನೀರು ಕುಡಿಯಬೇಡಿ.

5 ನಿಮಿಷ ವಿರಮಿಸಿಕೊಂಡು ನೀರು ಕುಡಿಯಿರಿ. ವ್ಯಾಯಾಮದ ನಂತರ ನಿಮ್ಮ ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡಿ, ಬೆವರು ಮತ್ತು ಹೃದಯ ಬಡಿತ ಸಾಮಾನ್ಯವಾದಾಗ ಮಾತ್ರ ನೀರು ಕುಡಿಯುವುದು ಉತ್ತಮ. ನೀರು ಕುಡಿಯುವಾಗ ಸಾವಧಾನವಾಗಿರಿ, ಒಮ್ಮೆಲೇ ಬಾಯ್ತುಂಬಾ ತುಂಬಿಕೊಂಡು ಕುಡಿಯಬೇಡಿ.

ಆರಾಮಾಗಿ ಗುಟುಕರಿಸುವುದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ.ಯಾವಾಗಲೂ ಕುಳಿತುಕೊಂಡೇ ನೀರು ಕುಡಿಯಿರಿ, ಅದು ದೇಹದ ಬಹುತೇಕ ಭಾಗಗಳನ್ನು ತಲುಪುತ್ತದೆ. ಜಿಮ್‌ನಲ್ಲಿ ವರ್ಕೌಟ್‌ ಬಳಿಕ ಸಾಮಾನ್ಯ ನೀರನ್ನೇ ಕುಡಿಯಿರಿ, ಫ್ರಿಡ್ಜ್‌ನಲ್ಲಿಟ್ಟಿರುವ ಕೋಲ್ಡ್‌ ವಾಟರ್‌ ಸೇವಿಸಬೇಡಿ. ಇದರಿಂದ ಅನೇಕ ಸಮಸ್ಯೆಗಳಾಗುತ್ತವೆ. ಜಿಮ್‌ನಲ್ಲಿ ವ್ಯಾಯಾಮದ ನಂತರ ನೀರಿಗೆ ನಿಂಬೆ ರಸ ಮತ್ತು ಬ್ಲಾಕ್‌ ಸಾಲ್ಟ್‌ ಹಾಕಿಕೊಂಡು ಕುಡಿಯಿರಿ. ಇದು ಬೆವರುವಿಕೆಯಿಂದ ಕಳೆದುಹೋದ ಎಲೆಕ್ಟ್ರೋಲೈಟ್‌ಗಳನ್ನು ಪುನಃ ತುಂಬಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read