ಜಾಲತಾಣದ ಮೂಲಕ ಲವ್ವಲ್ಲಿ ಬಿದ್ದ ಯುವಕನಿಗೆ ಶಾಕ್‌; ಅಜ್ಜಿಯಾಗ್ತಿದ್ದಾಳೆ ಆತ ಪ್ರೀತಿಸಿದಾಕೆ……!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಯುವ ಜನತೆ ಪ್ರೀತಿ ಪ್ರೇಮದಲ್ಲಿ ಬೀಳ್ತಿರೋ ಪ್ರಕರಣಗಳು ಸಾಮಾನ್ಯವಾಗಿವೆ. ಕೆಲವೊಮ್ಮೆ ಹುಡುಗಿಯ ಹೆಸರಲ್ಲಿ ಗೆಳೆತನ ಬೆಳೆಸಿ ವಂಚಕರು ಹಣ ಪೀಕುವುದೂ ಉಂಟು. ಜಾಲತಾಣಗಳಲ್ಲಾಗುವ ಪ್ರೀತಿ, ಪ್ರೇಮ ಸಕ್ಸಸ್‌ ಆಗುವುದು ಕೂಡ ಅಪರೂಪವೇ. ಚೀನಾದಲ್ಲಿ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಾನು ಪ್ರೀತಿಸಿದ ಯುವತಿ ಅಜ್ಜಿಯಾಗ್ತಿರೋ ಸುದ್ದಿ ಕೇಳಿ ಯುವಕ ಆಘಾತಕ್ಕೊಳಗಾಗಿದ್ದಾನೆ.

22 ವರ್ಷದ ಈ ಯುವಕನಿಗೆ ವರ್ಷದ ಹಿಂದೆ ಆತ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಯೊಬ್ಬಳ ಜೊತೆ ಸ್ನೇಹವಾಗಿತ್ತು. ಕ್ರಮೇಣ ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಹುಡುಗ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದ, ಭೇಟಿಯಾಗೋಣ ಅಂತಾ ಕೇಳಿದ್ದ. ಆಕೆಯೂ ಒಪ್ಪಿದ್ದಳು. ಆದರೆ ಇದ್ದಕ್ಕಿದ್ದಂತೆ ಗೆಳತಿಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅಸಲಿಗೆ ಆಕೆ ಯುವತಿಯಾಗಿರಲಿಲ್ಲ, ವಯಸ್ಸಾದ ಮಹಿಳೆಯಾಗಿದ್ದಳು. ತನ್ನ ವಯಸ್ಸನ್ನು ಮರೆಮಾಚಲು ಸಾಕಷ್ಟು ಮೇಕಪ್‌ ಮಾಡಿಕೊಂಡಿದ್ದಳು. ಆಕೆ ಯುವತಿ ಎಂದು ಭಾವಿಸಿ ಆತ ಪ್ರೀತಿಯಲ್ಲಿ ಬಿದ್ದಿದ್ದ.

ಪ್ರಿಯತಮೆಯ ಮೊಬೈಲ್‌ ಆಫ್‌ ಆಗಿದ್ದರಿಂದ ಕಂಗಾಲಾದ ಯುವಕ ಆಕೆಯ ಮನೆಯವರನ್ನು ಸಂಪರ್ಕಿಸಲು ಪ್ರಯತ್ನಿಸಿದ, ಆದರೆ ಯಶಸ್ವಿಯಾಗಲಿಲ್ಲ. ಕೊನೆಗೆ ಕೆಲವು ದಿನಗಳ ನಂತರ ಆತನಿಗೆ ಸತ್ಯ ತಿಳಿದಿತ್ತು. ಆತ ಪ್ರೀತಿಸಿದ ಮಹಿಳೆ ಅವನಿಗಿಂತ 20 ವರ್ಷ ದೊಡ್ಡವಳಾಗಿದ್ದಳು, ಸದ್ಯದಲ್ಲೇ ಆಕೆ ಅಜ್ಜಿಯಾಗುತ್ತಿದ್ದಾಳೆ ಅನ್ನೋ ವಿಚಾರವೂ ಗೊತ್ತಾಗಿತ್ತು. ಈ ಸತ್ಯ ಕೇಳಿದ ಹುಡುಗ ಬೆಚ್ಚಿಬಿದ್ದಿದ್ದ. ಕೊನೆಗೆ ಆಕೆಯೇ ಕರೆ ಮಾಡಿ ಯುವಕನಿಗೆ ಪೂರ್ತಿ ಸತ್ಯ ಹೇಳಿದ್ದಳು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read