ಜಾತಕದಲ್ಲಿ ಮಂಗಳ ದೋಷವಿದ್ರೆ ಕಾಡುತ್ತೆ ದಾಂಪತ್ಯದಲ್ಲಿ ಸಮಸ್ಯೆ

ಜಾತಕದಲ್ಲಿ ಮಂಗಳ ದೋಷವಿದ್ರೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಕಾಡುತ್ತವೆ. ಜಾತಕದಲ್ಲಿ ಮಂಗಳ ದೋಷವಿದ್ರೆ ಮದುವೆ ತಡವಾಗುತ್ತದೆ. ಇಲ್ಲವೆ ಮದುವೆ ನಂತ್ರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ದಾಂಪತ್ಯದಲ್ಲಿ ಸಮಸ್ಯೆ ಕಾಡುವುದು ಮಂಗಳ ದೋಷದಿಂದ. ಮಂಗಳ ಗ್ರಹ ತುಂಬಾ ಶಕ್ತಿಯುತ ಗ್ರಹ. ಇದಕ್ಕೆ ಒಂಟಿತನ ಇಷ್ಟ. ಆ ಗ್ರಹದ ಬಳಿ ಬೇರೆ ಗ್ರಹಗಳು ಬಂದ್ರೆ ಸಮನ್ವಯತೆಯ ಕೊರತೆ ಎದುರಾಗುತ್ತದೆ. ಇದ್ರಿಂದ ವಿವಾಹಕ್ಕಿಂತ ಮೊದಲೂ ಸಮಸ್ಯೆ ಎದುರಾಗುತ್ತದೆ.

ಮಂಗಳ ದೋಷದಿಂದ ಮದುವೆ ವಿಳಂಬವಾಗುತ್ತದೆ. ಮದುವೆ ಮುರಿದು ಬೀಳಬಹುದು. ಮದುವೆ ನಂತ್ರ ಸಾಮರಸ್ಯ ಕೊರತೆ ಎದುರಾಗಬಹುದು. ಗಂಡ ಮತ್ತು ಹೆಂಡತಿ ಮಧ್ಯೆ ಗಲಾಟೆ, ವಿಚ್ಛೇದನ ಇತ್ಯಾದಿ ಘಟನೆ ಸಂಭವಿಸುತ್ತದೆ.

ಮಂಗಳ ದೋಷವುಳ್ಳವರು ಮಂಗಳನ ಶಾಂತಿಗೆ ಕ್ರಮಕೈಗೊಳ್ಳಬೇಕು. ಹನುಮಂತನ ದೇವಸ್ಥಾನದಲ್ಲಿ ಬುಂದಿಯನ್ನು ಅರ್ಪಿಸಿ. ಮಂಗಳವಾರ ಸಂಜೆ ಹನುಮಾನ್ ಚಾಲೀಸ್ ಓದಿ. ಸಾಧ್ಯವಾದ್ರೆ ಮಂಗಳವಾರ ಕೆಂಪು ಬಟ್ಟೆಯನ್ನು ಧರಿಸಿ. ಹನುಮಂತನ ದೇವಸ್ಥಾನಕ್ಕೆ ಕೆಂಪು ಕುಂಕುಮವನ್ನು ಅರ್ಪಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read