ಛೇ ..! ಇದೆಂತಹ ದುರ್ವಿಧಿ: ಮೊದಲ ರಾತ್ರಿಯಂದೇ ನವದಂಪತಿಗಳು ಮೃತ್ಯು

ಉತ್ತರ ಪ್ರದೇಶ : ಸಾವು (death) ಹೇಗೆ..? ಯಾವಾಗ..? ಯಾವ ರೂಪದಲ್ಲಾದರೂ ಬರಬಹುದು. ಅದಕ್ಕೆ ಹೇಳುವುದು ಇರುವವರೆಗೆ ಖುಷಿಯಲ್ಲಿರುವುದೇ ಜೀವನ ಅಂತ. ಏನಿದು ಘಟನೆ ಅಂತೀರಾ…ಸುದ್ದಿ ಓದಿ.

ಮೊದಲ ರಾತ್ರಿಯಂದೇ (first night) ನವದಂಪತಿಗಳು ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.

ನವವಿವಾಹಿತ ದಂಪತಿಗಳು ಮದುವೆಯಾದ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ. ವಧು ಮತ್ತು ವರ ಹೃದಯಾಘಾತ (heart attack) ದಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ವರದಿ ವೇಳೆ ಗೊತ್ತಾಗಿದೆ. ಮೊದಲ ರಾತ್ರಿಯಂದು ಕೋಣೆಗೆ ಹೋದ ಮದುಮಕ್ಕಳು ಮರುದಿನ ಶವವಾಗಿ ಬಿದ್ದಿದ್ದಾರೆ.

22 ವರ್ಷದ ಪ್ರತಾಪ್ ಯಾದವ್ ಎಂಬುವವರು ಮೇ 30 ರಂದು 20 ವರ್ಷದ ಪುಷ್ಪಾ ಅವರನ್ನು ಮದುವೆಯಾಗಿದ್ದರು. ಮದುವೆ (marriage)
ಯ ನಂತರ ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಕೋಣೆಗೆ ಹೋದರು ಆದರೆ ಮರುದಿನ ಬೆಳಿಗ್ಗೆ ಶವವಾಗಿ ಪತ್ತೆಯಾದರು.

ಪೊಲೀಸರು ಸ್ಥಳಕ್ಕೆ ತಲುಪಿ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ವರದಿ (Postmortem report) ತೋರಿಸುತ್ತದೆ ಎಂದು ಜಿಲ್ಲೆಯ ಎಸ್ಪಿ ಪ್ರಶಾಂತ್ ವರ್ಮಾ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read