ಚುನಾವಣಾ ಫಲಿತಾಂಶದ ನಿಖರ ‘ಭವಿಷ್ಯ’ ನುಡಿದವರಿಗೆ 10 ಲಕ್ಷ ರೂ. ಬಹುಮಾನ; ಯಾರಿಗೊಲಿಯಲಿದೆ ಅದೃಷ್ಟ ?

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದ್ದು, ಇದಕ್ಕೂ ಮುನ್ನ ಮಂಗಳೂರಿನ ಖ್ಯಾತ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಫಲಿತಾಂಶದ ಕುರಿತು ನಿಖರ ಭವಿಷ್ಯ ಹೇಳುವವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಒಟ್ಟು 20 ಪ್ರಶ್ನೆಗಳನ್ನು ಕೇಳಲಾಗಿದ್ದು, 10ಕ್ಕೂ ಅಧಿಕ ಜ್ಯೋತಿಷಿಗಳು ಫಲಿತಾಂಶದ ಕುರಿತು ತಮ್ಮ ಭವಿಷ್ಯವನ್ನು ನರೇಂದ್ರ ನಾಯಕ್ ಅವರಿಗೆ ಅಂಚೆ ಮೂಲಕ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಪೈಕಿ 19 ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರೂ ಅಂತವರಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ನರೇಂದ್ರ ನಾಯಕ್ ಹೇಳಿದ್ದಾರೆ.

ಹೀಗಾಗಿ ಇಂದು ಹೊರಬೀಳಲಿರುವ ಫಲಿತಾಂಶದ ಬಳಿಕ ಯಾವ ಜ್ಯೋತಿಷಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇನ್ನು ಈ ಕುರಿತಂತೆ ಮಾತನಾಡಿರುವ ನರೇಂದ್ರ ನಾಯಕ್, ಮದುವೆ ಸೇರಿದಂತೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಹೇಳುವ ಜ್ಯೋತಿಷಿಗಳು ಚುನಾವಣಾ ಫಲಿತಾಂಶದ ಕುರಿತು ಎಷ್ಟು ನಿಖರ ಭವಿಷ್ಯ ನುಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read