ಚಪಾತಿ ಬದಲು ಸಬ್ಬಕ್ಕಿ ಸೇವಿಸಿ ಪರಿಣಾಮ ನೋಡಿ

ಹೆಚ್ಚಾಗಿ ಪಾಯಸಕ್ಕೆ ಮಾತ್ರ ಬಳಕೆಯಾಗುವ, ಕೆಲವೊಮ್ಮೆ ಸೆಂಡಿಗೆ ಹಾಗೂ ವಡೆ ರೂಪದಲ್ಲಿ ಕಾಣಿಸಿಕೊಳ್ಳುವ ಸಬ್ಬಕ್ಕಿ ಎಂದರೆ ಮೂಗು ಮುರಿಯುತ್ತೀರೇ? ಇದರ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯದ ಉಪಯೋಗಗಳು ಇವೆ ಎಂಬುದು ನಿಮಗೆ ಗೊತ್ತೇ?

ಗ್ಲುಟೆನ್ ಮುಕ್ತವಾಗಿರುವ ಸಬ್ಬಕ್ಕಿಯಲ್ಲಿ ಕಡಿಮೆ ಪ್ರಮಾಣದ ಪ್ರೊಟೀನ್ ಮತ್ತು ವಿಟಮಿನ್ ಅಂಶಗಳಿವೆ. ಕಾರ್ಬೋಹೈಡ್ರೇಟ್ ಪ್ರಮಾಣ ಸಾಕಷ್ಟಿದ್ದು ದೇಹ ತೂಕ ಹೆಚ್ಚು ಮಾಡಲು ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ರಾತ್ರಿ ಊಟ ಮಾಡದವರು ಚಪಾತಿ ಬದಲು ಸಬ್ಬಕ್ಕಿ ಉಪ್ಪಿಟ್ಟು ತಯಾರಿಸಿ ತಿನ್ನಬಹುದು.

ಸಬ್ಬಕ್ಕಿಯಲ್ಲಿ ವಿಟಮಿನ್ ಬಿ6 ಮತ್ತು ಪೋಲೆಟ್ ಅಂಶಗಳು ಹೇರಳವಾಗಿರುವುದರಿಂದ ಗರ್ಭಿಣಿಯರು ಇದನ್ನು ನಿತ್ಯ ಸೇವಿಸುವುದು ಒಳ್ಳೆಯದು. ಭ್ರೂಣದ ಬೆಳವಣಿಗೆಗೆ ಇದು ಸಹಕಾರಿ.

ಜೀರ್ಣಕ್ರಿಯೆ ಸಮಸ್ಯೆ ಇರುವವರು ಸಬ್ಬಕ್ಕಿಯನ್ನು ಒಂದಿಲ್ಲೊಂದು ರೂಪದಲ್ಲಿ ಸೇವಿಸುವುದು ಒಳ್ಳೆಯದು. ಹೊಟ್ಟೆಯಲ್ಲಿ ಜೀರ್ಣವಾಗದೆ ಉಳಿದಿರುವ ಆಹಾರವನ್ನು ವಿಲೇವಾರಿ ಮಾಡುವ ಇದು ಮಲಬದ್ಧತೆ ಸಮಸ್ಯೆ ಕಾಡದಂತೆಯೂ ನೋಡಿಕೊಳ್ಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read