‘ಘೋಡೆ ಪೇ ಸವಾರ್’ ಹಾಡಿಗೆ ಹೆಜ್ಜೆ ಹಾಕಿದ ಲಡಾಕ್ ಯುವತಿಯರು | Watch Video

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ, ‘ಮೇರಾ ದಿಲ್ ಎ ಪುಕಾರೆ ಆಜಾ’, ಹಾಡು ಸಖತ್ ಸೌಂಡ್ ಮಾಡಿತ್ತು. ಈಗ ಅದೇ ಲೀಸ್ಟ್ ಗೆ ಕಲಾ ಸಿನೆಮಾದ ‘ಘೋಡೆ ಪೇ ಸವಾರ್’ (ಕುದುರೆ ಏರಿ ಬಂದ…..) ಹಾಡು ಕೂಡಾ ಸೇರ್ಕೊಳ್ತಿದೆ. ಇದೇ ಹಾಡಿಗೆ ಲಡಾಕ್‌ನ ಇಬ್ಬರು ಸುಂದರಿಯರು ಹೆಜ್ಜೆ ಹಾಕಿದ್ದಾರೆ. ವಿಶೇಷ ಏನಂದ್ರೆ ಲಡಾಕ್‌ನ ವಿಶೇಷ ಬಗೆಯ ಉಡುಗೆ ತೊಟ್ಟು, ಈ ಯುವತಿಯರು ನೃತ್ಯ ಮಾಡಿದ್ದಾರೆ.

ಹಿಮ ಆವೃತ ಪರ್ವತಗಳ ನಡುವೆ, ಇಬ್ಬರು ಸುಂದರಿಯರು ಲಡಾಕ್ ಶೈಲಿಯಲ್ಲೇ ನೃತ್ಯ ಮಾಡ್ತಿರೋದನ್ನ ನೋಡೋದೆ ಕಣ್ಣಿಗೆ ಹಬ್ಬ. ಅದರಲ್ಲೂ ಈ ಯುವತಿಯರ ಮುಖಭಾವ ನೋಡಿ, ನೆಟ್ಟಿಗರು ಈ ವಿಡಿಯೋಗೆ ಹಾಗೂ ಯುವತಿಯರ ಪ್ರತಿಭೆಗೆ ಫುಲ್ ಫಿದಾ ಆಗ್ಹೋಗಿದ್ದಾರೆ.

ಟ್ವಿಟ್ಟರ್‌ನಲ್ಲಿ ಜಿಗ್ಮತ್ ಅನ್ನುವವರು ತಮ್ಮ ಅಕೌಂಟ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇವರು ಶೀರ್ಷಿಕೆಯಲ್ಲಿ ‘ಘೋಡೆ ಪೇ ಸವಾರ್‌’ ಈ ಹಾಡಿಗೆ ತಾಳಕ್ಕೆ ತಕ್ಕಂತೆ ಕುಣಿದ ಪುಂಟಸೋಕ್, ಪಝಾ ಲಾಮೋ ಅವರ ಹೆಜ್ಜೆಗಳು’ ಎಂದು ಬರೆದಿದ್ದಾರೆ ಜೊತೆಗೆ ಲಡಾಖ್ ಪ್ರತಿಭೆಗಳಿಗೆ ನಿಮ್ಮ ಬೆಂಬಲ ಬೇಕು ಎಂದೂ ಬರೆದಿದ್ದಾರೆ. 45 ಸೆಕೆಂಡ್‌ನ ಈ ವಿಡಿಯೋ ವೈರಲ್ ಆಗಿದ್ದು, ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಅದರ ಜೊತೆಗೆ ಈ ವಿಡಿಯೋಗೆ 600ಕ್ಕೂ ಹೆಚ್ಚು ಲೈಕ್ ಸಿಕ್ಕಿವೆ.

ಈ ಡಾನ್ಸ್ ನೊಡಿದವರೆಲ್ಲರೂ ತಮ್ಮ ತಮ್ಮ ಭಾವನೆಯನ್ನ ಕಾಮೆಂಟ್ ಬಾಕ್ಸ್‌ನಲ್ಲಿ ಬರೆದಿದ್ದಾರೆ. ಒಬ್ಬರು ಬಾಲಿವುಡ್ ಡಾನ್ಸರ್‌ಗಿಂತಲೂ ಇದು ತುಂಬಾ ಬೆಸ್ಟ್ ಆಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೃತ್ಯ ಸಂಯೋಜನೆ ತುಂಬಾ ಉತ್ತಮವಾಗಿದೆ. ಆದ್ದರಿಂದ ಇದು ನೋಡಲು ಇಷ್ಟು ಸುಂದರವಾಗಿದೆ ಎಂದು ಹೇಳಿದ್ದಾರೆ. ಮಗದೊಬ್ಬರು ಇದು ಯಾವ ಶೈಲಿಯ ನೃತ್ಯ ಇದಕ್ಕೆ ಇರುವ ಹೆಸರೇನು ಎಂದು ಕೇಳಿದ್ದಾರೆ. ಒಟ್ಟಾರೆ ಈ ಯುವತಿಯರು ಅದ್ಭುತ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಂತೂ ಸತ್ಯ.

https://twitter.com/nontsay/status/1614623489910276098?ref_src=twsrc%5Etfw%7Ctwcamp%5Etweetembed%7Ctwterm%5E1614623489910276098%7Ctwgr%5E5f2a579ef8b2c10c5a610ed7fb7342b396068ad0%7Ctwcon%5Es1_&ref_url=https%3A%2F%2Fwww.tv9hindi.com%2Ftrending%2Ftwo-women-dances-to-ghode-pe-sawar-in-ladakh-video-went-viral-au221-1664719.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read