ಗೊರಕೆ ಸಮಸ್ಯೆಯಿಂದ ಮುಕ್ತಿ ಬೇಕಾ….? ಬಳಸಿ ಈ ಮನೆಮದ್ದು

ಅತಿಯಾದ ಕೆಲಸದಿಂದ ಆಯಾಸವಾಗುವ ಕಾರಣ ರಾತ್ರಿ ಹಾಯಾಗಿ ಮಲಗಬೇಕೆನಿಸುತ್ತದೆ. ಆದರೆ ಪಕ್ಕದಲ್ಲಿರುವವರು ಗೊರಕೆ ಹೊಡೆಯುವುದರಿಂದ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ. ಹಾಗಾಗಿ ಗೊರಕೆ ಸಮಸ್ಯೆ ಇರುವವರು ಈ ಮನೆಮದ್ದನ್ನು ಸೇವಿಸಿ ಗೊರಕೆಯನ್ನು ತಪ್ಪಿಸಿ.

* ಗೊರಕೆ ಸಮಸ್ಯೆ ನಿವಾರಿಸಲು ಏಲಕ್ಕಿ ಬಹಳ ಪರಿಣಾಮಕಾರಿಯಾಗಿದೆ. ಇದು ಮುಚ್ಚಿದ ಮೂಗು ತೆರೆಯಲು ಸಹಾಯ ಮಾಡುತ್ತದೆ. ಹಾಗಾಗಿ 1 ಚಮಚ ಏಲಕ್ಕಿ ಪುಡಿಯನ್ನು 1 ಲೋಟ ನೀರಿನಲ್ಲಿ ಬೆರೆಸಿ ಮಲಗುವ ಅರ್ಧ ಗಂಟೆಯ ಮೊದಲು ಸೇವಿಸಿ. ಇದರಿಂದ ಗೊರಕೆ ಸಮಸ್ಯೆ ನಿವಾರಣೆಯಾಗುತ್ತದೆ.

* ತುಪ್ಪವು ಗೊರಕೆ ಸಮಸ್ಯೆಯನ್ನು ದೂರಮಾಡುತ್ತದೆ. ಹಾಗಾಗಿ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ 2 ಹನಿ ಮೂಗಿಗೆ ಹಾಕಿ. ಇದನ್ನು ಮಲಗುವ ಅರ್ಧ ಗಂಟೆಯ ಮೊದಲು ಮಾಡಿ.

* ಆಲಿವ್ ಆಯಿಲ್ ಕೂಡ ಮೂಗಿನ ನಾಳ ತೆರೆಯಲು ಸಹಕಾರಿಯಾಗಿದೆ. ಮಲಗುವ ಮುನ್ನ ಜೇನುತುಪ್ಪದೊಂದಿಗೆ 1 ಚಮಚ ಆಲೀವ್ ಆಯಿಲ್ ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read