ಗಾಂಜಾ ವ್ಯಸನದಿಂದ ಹೊರಬರಲು ಮದ್ಯ ವ್ಯಸನ ಮುಕ್ತ ಪುನರ್ವಸತಿ ಕೇಂದ್ರ ಸೇರಿದ್ದ ಯುವಕ; 5 ದಿನಗಳಲ್ಲಿ ಸಾವು

ಚಿಕ್ಕಬಳ್ಳಾಪುರ: ಗಾಂಜಾ ವ್ಯಸನಿಯಾಗಿದ್ದ ಯುವಕನೊಬ್ಬ, ವ್ಯಸನ ಬಿಡಲು ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಸೇರಿದ್ದು, ಕೆಲವೇ ದಿನಗಳಲ್ಲಿ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ.

21 ವರ್ಷದ ಶ್ರೀನಿವಾಸಪುರದ ಮಂಜುನಾಥ್ ಮೃತ ಯುವಕ. ಯುವಕನ ಗಾಂಜಾ ವ್ಯಸನ ಬಿಡಿಸಲು ಚಿಂತಾಮಣಿ ತಾಲೂಕಿನ ಬುಡಗವಾರನಹಳ್ಳಿ ಬಳಿಯ ಮದ್ಯವ್ಯಸನ ಮುಕ್ತ ಹಾಗೂ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಪೋಷಕರು ಸೇರಿಸಿದ್ದರು. ಕಳೆದ 5 ದಿನಗಳಿಂದ ಈ ಕೇಂದ್ರದಲ್ಲಿದ್ದ ಯುವಕ ಈಗ ಏಕಾಏಕಿ ಸಾವನ್ನಪ್ಪಿದ್ದಾನೆ.

ಯುವಕನ ದೇಹದ ಮೇಲೆ ಹಲ್ಲೆಯ ಗುರುತುಗಳು ಪತ್ತೆಯಾಗಿದ್ದು, ಯುವಕನ ಸಾವು ಅನುಮಾನಕ್ಕೆ ಕಾರಣವಾಗಿದೆ. ಚಿಂತಾಮಣಿಯ ಗ್ರಾಮಾಂತರ ಠಾಣೆಯಲ್ಲಿ ಯುವಕನ ಪೋಷಕರು ದೂರು ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read