‘ಗರ್ಭ ನಿರೋಧಕ’ ಮಾತ್ರೆ ಸೇವನೆ ಮುನ್ನ ಇದು ಗೊತ್ತಿರಲಿ

ಅನಗತ್ಯ ಗರ್ಭ ಧಾರಣೆ ತಪ್ಪಿಸಲು ಗರ್ಭ ನಿರೋಧಕ ಮಾತ್ರೆ ಸುಲಭ ಉಪಾಯ. ಇದೇ ಕಾರಣಕ್ಕೆ ಮಹಿಳೆಯರು ಈ ಮಾತ್ರೆ ಸೇವನೆಗೆ ಹೆಚ್ಚು ಮಹತ್ವ ನೀಡ್ತಾರೆ.

ಗರ್ಭನಿರೋಧಕ ಮಾತ್ರೆಯನ್ನು ದೀರ್ಘ ಸಮಯದವರೆಗೆ ಸೇವನೆ ಮಾಡುವುದ್ರಿಂದ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸಂಶೋಧನೆಯೊಂದು ಗರ್ಭ ನಿರೋಧಕ ಮಾತ್ರೆ ಸೇವನೆಯಿಂದ ಏನೆಲ್ಲ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ತಿಳಿಸಿತ್ತು.

ಗರ್ಭ ನಿರೋಧಕ ಮಾತ್ರೆ ಸೇನವೆಯಿಂದ ತಲೆನೋವು, ಮೈಗ್ರೇನ್ ಸಮಸ್ಯೆ ಎದುರಾಗುತ್ತದೆಯಂತೆ. ನಿಮಗೂ ಮೈಗ್ರೇನ್ ಸಮಸ್ಯೆ ಕಾಡ್ತಿದ್ದರೆ ಒಮ್ಮೆ ಮಾತ್ರೆ ಡೋಸ್ ಕಡಿಮೆ ಮಾಡಿ ನೋಡಿ. ಮೈಗ್ರೇನ್ ಕಡಿಮೆಯಾದ್ರೆ ಈ ಮಾತ್ರೆಯೇ ನಿಮ್ಮ ಮೈಗ್ರೇನ್ ಗೆ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ನೆನಪಿರಲಿ ಮಾತ್ರೆ ಪ್ರಮಾಣ ಕಡಿಮೆ ಅಥವಾ ಹೆಚ್ಚು ಮಾಡುವ ಮೊದಲು ವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆಯಿರಿ.

ಸ್ತನದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲ ಮಹಿಳೆಯರಿಗೆ ಮಾತ್ರೆ ಸೇವೆನ ಶುರು ಮಾಡಿದ ವಾರದಲ್ಲಿಯೇ ಸ್ತನದಲ್ಲಿ ನೋವು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಈ ಸಂದರ್ಭದಲ್ಲಿ ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ. ಹೀಗೆ ಮಾಡಿದ್ರೆ ಸ್ತನ ನೋವು ಸ್ವಲ್ಪ ಕಡಿಮೆಯಾಗುತ್ತದೆ.

ದೀರ್ಘಕಾಲದವರೆಗೆ ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತದೆ. ನಿಮಗೂ ತೂಕ ಹೆಚ್ಚಾಗುತ್ತಿದ್ದರೆ ವೈದ್ಯರ ಸಲಹೆ ಪಡೆದು ಮಾತ್ರೆಯನ್ನು ಬದಲಿಸಿ.

ತುಂಬಾ ಸಮಯದಿಂದ ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡ್ತಿದ್ದವರಿಗೆ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮಾನಸಿಕ ಸಮಸ್ಯೆ ಕಾಡಲು ಶುರುವಾಗುತ್ತದೆ. ಕೋಪ, ಕಿರಿಕಿರಿ ಹೆಚ್ಚಾಗುತ್ತದೆ. ಮಾತ್ರೆ ಸೇವನೆ ಶುರು ಮಾಡಿದ ಕೆಲವೇ ದಿನಗಳಲ್ಲಿ ಇದ್ರ ಪರಿಣಾಮ ನಿಮಗೆ ಗೊತ್ತಾದ್ರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read