ಗರ್ಭಿಣಿಯರು ಸಂಗೀತ ಕೇಳುವುದರಿಂದ ಸಿಗುತ್ತೆ ಸಕಾರಾತ್ಮಕ ಪರಿಣಾಮ

ಭಾರತೀಯ ಶಾಸ್ತ್ರೀಯ ಸಂಗೀತ ಗರ್ಭಿಣಿಯರು ಮತ್ತು ಅವರ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದಾಗ ಸಂಗೀತವು ಹುಟ್ಟಲಿರುವ ಮಗುವಿನ ಮೇಲೆ ಯಾವ ರೀತಿಯಾದ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಕಂಡುಹಿಡಿದಿದ್ದಾರೆ.

*ಗರ್ಭದಲ್ಲಿನ ಮಗು ಸಂಗೀತವನ್ನು ಕೇಳುವುದರಿಂದ ಮಗುವಿನ ಚಲನೆ ಸುಧಾರಿಸುತ್ತದೆ. ಮಗು ಸಂಗೀತದೊಂದಿಗೆ ಮೂವ್ ಮಾಡಲು ಪ್ರಯತ್ನಿಸುತ್ತದೆ ಎನ್ನಲಾಗಿದೆ.

*ಸಂಗೀತ ಕೇಳುವುದರಿಂದ ನಿಮ್ಮ ಮಗುವಿನ ಶ್ರವಣ ಸಂವೇದನೆ ಹೆಚ್ಚಾಗುತ್ತದೆ. ನಿಮ್ಮ ಮಗು ಧ್ವನಿ ತರಂಗಗಳ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತದೆ. ಇದರಿಂದ ಮಗುವಿನ ಏಕಾಗ್ರತೆ, ಶ್ರವಣೇಂದ್ರಿಯ ಮತ್ತು ಕೌಶಲ್ಯಗಳು ಗಮನಾರ್ಹವಾಗಿ ಹೆಚ್ಚಾಗುತ್ತದೆ.

*ಕೆಲವು ಸಂಶೋಧಕರು ಮಗು ಜನಿಸಿದ ಬಳಿಕವೂ ಅದು ಗರ್ಭದಲ್ಲಿರುವಾಗ ಕೇಳಿದ ಸಂಗೀತವನ್ನು ನೆನಪಿಟ್ಟುಕೊಳ್ಳುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಇದರಿಂದ ಮಗು ತುಂಬಾ ಹಠ ಹಿಡಿದಾಗ ಅದನ್ನು ಶಮನಗೊಳಿಸಲು ಅದೇ ಸಂಗೀತವನ್ನು ಬಳಸಬಹುದು.

*ಗರ್ಭಾವಸ್ಥೆಯಲ್ಲಿ ಮಗು ಕೇಳುವ ಸಂಗೀತವು ಒಟ್ಟಾರೆ ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಹಿತವಾದ ಸಂಗೀತ ಕೇಳಿದ ಮಗುವಿನ ವ್ಯಕ್ತಿತ್ವ ಶಾಂತವಾಗಿರುತ್ತದೆಯಂತೆ. ಹಾಗೇ ಗಟ್ಟಿಯಾದ ಸಂಗೀತವನ್ನು ಕೇಳಿದರೆ ಮಗುವಿನ ವ್ಯಕ್ತಿತ್ವ ಆಕ್ರಮಣಕಾರಿಯಾಗುತ್ತದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read