ಗರ್ಭಿಣಿಯರು ತಪ್ಪದೇ ಈ ಕೆಲಸ ಮಾಡಿ

ಗರ್ಭಿಣಿಯಾಗಿರುವಾಗ ಒಳ್ಳೆಯ ವಿಷಯಗಳನ್ನೇ ಕೇಳಬೇಕು, ಉತ್ತಮ ಸಂಗತಿಗಳನ್ನೇ ಮಾತನಾಡಬೇಕು ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದರ ಹಿಂದೆಯೂ ಒಂದು ಸದುದ್ದೇಶವಿದೆ.

ಗರ್ಭಿಣಿಯರು ಕೇಳುವುದನ್ನು ಮಕ್ಕಳೂ ಕೇಳಿಸಿಕೊಂಡು ಅವರ ಮೆದುಳು ಬೆಳವಣಿಗೆ ಆಗುವಾಗ ಇದು ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಸಂಗೀತ ಕೇಳುವುದರಿಂದ ಒತ್ತಡ ನಿವಾರಿಸಬಹುದು. ಸಂಗೀತದಿಂದ ಅನೇಕ ದೈಹಿಕ ಮತ್ತು ಮಾನಸಿಕ ರೋಗಗಳನ್ನು ನಿವಾರಿಸಿದ ಉದಾಹರಣೆಗಳಿವೆ. ಗರ್ಭಿಣಿಯರ ಮೇಲೆ ಸಂಗೀತ ಅನೇಕ ಉತ್ತಮ ಪರಿಣಾಮ ಬೀರುತ್ತವೆ ಎಂಬುದನ್ನು ಸಂಶೋಧನೆ ದೃಢಪಡಿಸಿದೆ.

ಅದರಲ್ಲೂ ಭಾರತೀಯ ಶಾಸ್ತ್ರೀಯ ಸಂಗೀತ, ಕಲ್ಯಾಣಿ ರಾಗ ಗರ್ಭದಲ್ಲಿರುವ ಮಗುವಿನ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ. ಅಧ್ಯಯನದ ಭಾಗವಾಗಿ ಮಹಿಳೆಯರ ಗುಂಪನ್ನು ಆಯ್ಕೆ ಮಾಡಿ ಅವರಿಗೆ 20 ನಿಮಿಷ ಕಲ್ಯಾಣಿ ರಾಗ ಕೇಳಿಸಲಾಯಿತು. 20 ದಿನಗಳ ನಂತರ ಮಗುವಿನ ಕಡೆಯಿಂದಲೂ ಸ್ಪಂದನೆ, ಚಲನೆ ಕಂಡುಬಂದಿತ್ತು. ಗರ್ಭಿಣಿಯರಲ್ಲೂ ಇದು ಶಾಂತ ಮನೋಭಾವವನ್ನು ಹುಟ್ಟಿಸಿದೆ ಹಾಗೂ ಸಕಾರಾತ್ಮಕ ಪರಿಣಾಮ ಬೀರಿದೆ.

ಇದು ಉತ್ತಮ ಭಾವನೆಯನ್ನು ಉತ್ತೇಜಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಗುವಿನೊಂದಿಗೆ ಬಾಂಧವ್ಯವನ್ನು ವೃದ್ಧಿಪಡಿಸುತ್ತದೆ. ಮಗುವಿನ ಶ್ರವಣ ಸಂವೇದನೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿದ್ದವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read