ಗಂಡು ಮಗುವಿಗೆ ಜನ್ಮ ನೀಡಿದ 14 ವರ್ಷದ ಬಾಲಕಿ…..!

ಕೇವಲ 14 ವರ್ಷದ ಬಾಲಕಿಯೊಬ್ಬಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗದಲ್ಲಿ ನಡೆದಿದೆ.

ಹೊಸದುರ್ಗ ತಾಲೂಕಿನ ಗ್ರಾಮ ಒಂದರ ಬಾಲಕಿ ಶುಕ್ರವಾರ ಮಗುವಿಗೆ ಜನ್ಮ ನೀಡಿದ್ದು, ಬಾಲಕಿಯ ಸೋದರತ್ತೆಯ ಮಗನೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಎಂಟನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದ ಬಾಲಕಿ ಮನೆಯಲ್ಲಿದ್ದು, ಇವರ ಮನೆ ಎದುರಲ್ಲೇ ಸೋದರತ್ತೆಯ ಮನೆಯೂ ಇತ್ತು. ಗಾರೆ ಕೆಲಸ ಮಾಡುತ್ತಿದ್ದ ಆಕೆಯ ಮಗ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ ಎನ್ನಲಾಗಿದೆ.

ಇದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಎರಡು ಕುಟುಂಬಗಳ ಸದಸ್ಯರು ದೇವಸ್ಥಾನ ಒಂದರಲ್ಲಿ ಮದುವೆ ನೆರವೇರಿಸಿದ್ದರು. ಆ ಬಳಿಕ ಬಾಲಕಿ ಸೋದರತ್ತೆಯ ಮನೆಯಲ್ಲಿ ವಾಸವಿದ್ದು, ಶುಕ್ರವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಕೂಡಲೇ ಆಕೆಯನ್ನು ಹೊಸದುರ್ಗದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಜನಿಸಿದ ಬಳಿಕ ಆಸ್ಪತ್ರೆಯ ಸಿಬ್ಬಂದಿ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ನೀಡಿದ್ದರು. ಸಿಡಿಪಿಓ ಅಭಿಲಾಷ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇದೀಗ ಹೊಸದುರ್ಗ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read