ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ದಾಖಲಾಗಿದೆ ಇಂತಹ ಅಸಾಧ್ಯವಾದ ಕ್ಯಾಚ್‌; ಇಲ್ಲಿದೆ ನೋಡಿ ರೋಮಾಂಚನಕಾರಿ ವಿಡಿಯೋ…..!

ಸಿಡ್ನಿ ಸಿಕ್ಸರ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವೆ ಭಾನುವಾರ ನಡೆದ ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ಕಲ್ಪನೆಗೂ ಮೀರಿದ ಘಟನೆಯೊಂದು ಸಂಭವಿಸಿದೆ. ಇಲ್ಲಿಯವರೆಗೂ ಕ್ರಿಕೆಟ್ ಮೈದಾನದಲ್ಲಿ ಯಾರೂ ಕಾಣದಂತಹ ದೃಶ್ಯ ಇದು. ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೀಲ್ಡರ್ ಒಬ್ಬ ಇಂತಹ ಕ್ಯಾಚ್ ತೆಗೆದುಕೊಂಡಿದ್ದಾರೆ. ಬ್ರಿಸ್ಬೇನ್ ಹೀಟ್‌ನ ಫೀಲ್ಡರ್ ಮೈಕೆಲ್ ನೇಸರ್ ಹಿಡಿದಿರೋ ಕ್ಯಾಚ್‌ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮೈಕಲ್ ನೇಸರ್ ಈ ಕ್ಯಾಚ್ ತೆಗೆದುಕೊಳ್ಳಲು ಬೌಂಡರಿಯಿಂದ 2 ರಿಂದ 3 ಮೀಟರ್ ಹೊರಗೆ ಹೋದರು. ನಂತರ ಬೌಂಡರಿ ಹೊರಗಿನಿಂದ ಚೆಂಡನ್ನು ಎರಡು ಬಾರಿ ಗಾಳಿಯಲ್ಲಿ ಹಾರಿಸುವ ಒಳಕ್ಕೆ ತಂದು ಕ್ಯಾಚ್‌ ತೆಗೆದುಕೊಂಡಿದ್ದಾರೆ. ಮೈಕಲ್ ನೆಸರ್ ಅವರ ಈ ಕ್ಯಾಚ್‌ನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಇದು ಕ್ಯಾಚ್‌ ಹೌದೋ ಅಲ್ಲವೋ ಎಂಬ ಚರ್ಚೆಯೂ ನಡೆಯುತ್ತಿದೆ.

ಸಿಡ್ನಿ ಸಿಕ್ಸರ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವೆ ನಡೆದ ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ನಡೆದ ಘಟನೆ ಇದು. ಸಿಡ್ನಿ ಸಿಕ್ಸರ್ಸ್ ಬ್ಯಾಟ್ಸ್‌ಮನ್ ಜೋರ್ಡಾನ್ ಸಿಲ್ಕ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಜೋರ್ಡಾನ್ ಸಿಲ್ಕ್ 23 ಎಸೆತಗಳಲ್ಲಿ 41 ರನ್ ಗಳಿಸಿದ್ದರು. ಇನ್ನಷ್ಟು ಅಪಾಯಕಾರಿ ಹೊಡೆತಕ್ಕೆ ಆತ ಕೈಹಾಕುವ ಮೊದಲು, ಮೈಕೆಲ್ ನೇಸರ್ 19 ನೇ ಓವರ್‌ನ ಎರಡನೇ ಎಸೆತದಲ್ಲಿ ಅಸಾಧ್ಯವಾದ ಕ್ಯಾಚ್ ಪಡೆದರು.

https://twitter.com/cricketcomau/status/1609514762391654400?ref_src=twsrc%5Etfw%7Ctwcamp%5Etweetembed%7Ctwterm%5E1609514762391654400%7Ctwgr%5Edd7213d2143b88a600caac0d790fdf53fe016d09%7Ctwcon%5Es1_&ref_url=https%3A%2F%2Fzeenews.india.com%2Fhindi%2Fsports%2Fcricket%2Fmichael-neser-controversial-catch-is-it-a-six-or-out-big-bash-league-sydney-sixers-vs-brisbane-heat-match%2F1511632

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read