ಕ್ಯಾಲ್ಸಿಯಂ, ಪೊಟ್ಯಾಶಿಯಂ ಹೇರಳವಾಗಿರುವ ಕಾಬುಲ್ ಕಡಲೆ ಮರೆಯದೆ ತಿನ್ನಿ

ಬಾಯಿಗೂ ರುಚಿ ಕೊಡುವ ಆರೋಗ್ಯಕ್ಕೂ ಹಲವು ಪ್ರಯೋಜನಗಳನ್ನು ಮಾಡುವ ಕಾಬುಲ್ ಕಡಲೆಯನ್ನು ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಇದರಲ್ಲಿ ಎಷ್ಟೆಲ್ಲಾ ಆರೋಗ್ಯಕರ ಅಂಶಗಳಿವೆ ಎಂಬುದು ನಿಮಗೆ ಗೊತ್ತೇ?

ಇದರಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಹೇರಳವಾಗಿದ್ದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಇದನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.

ಕಾಬುಲ್ ಕಡಲೆಯಲ್ಲಿ ಹೆಚ್ಚಿನ ಪೌಷ್ಟಿಕ ಸತ್ವಗಳು ಹಾಗು ನಾರಿನಂಶ ಇರುವುದರಿಂದ ನಿಮ್ಮ ದೇಹ ತೂಕ ಇಳಿಸಲು ಇದು ನೆರವಾಗುತ್ತದೆ. ಹೆಚ್ಚು ಹೊತ್ತು ಹಸಿವಾಗದಂತೆ ಇದು ನೋಡಿಕೊಳ್ಳುತ್ತದೆ. ಕೊಬ್ಬಿನ ಅಂಶಗಳನ್ನು ಕರಗಿಸುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜಿಂಕ್ ಮತ್ತು ಕಾಪರ್ ಅಂಶ ಹೇರಳವಾಗಿರುವ ಇದರ ಸೇವನೆಯಿಂದ ವೈರಸ್ ಹಾಗೂ ಬ್ಯಾಕ್ಟೀರಿಯಾದಿಂದ ಬರುವ ರೋಗಗಳು ಬರದಂತೆ ತಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read