ಕೋಮಾದಲ್ಲಿರೋ ತಂದೆಯ ಎದುರು ವಧು-ವರರ ವಿಲಕ್ಷಣ ಆಚರಣೆ; ನೆಟ್ಟಿಗರಿಂದ ಆಕ್ರೋಶ….!

ಚೀನಾದಲ್ಲಿ ನಡೆದ ವಿಚಿತ್ರ ಘಟನೆಯೊಂದು ವೈರಲ್‌ ಆಗಿದೆ. ತಂದೆ ಕೋಮಾದಲ್ಲಿದ್ದರೂ ಮಗ ಸಂಪ್ರದಾಯವನ್ನು ಹಠಕ್ಕೆ ಬಿದ್ದು ಪಾಲಿಸಿರೋದು ಬೆಳಕಿಗೆ ಬಂದಿದೆ. ಚೀನಾದ ಹುಬೈ ಪ್ರಾಂತ್ಯದ ವ್ಯಕ್ತಿ ಮೆದುಳಿನಲ್ಲಿ ರಕ್ತಸ್ರಾವವಾಗಿ ಆಸ್ಪತ್ರೆ ಸೇರಿದ್ದ. ಸುಮಾರು 6 ತಿಂಗಳುಗಳಿಂದ ಆತ ಕೋಮಾದಲ್ಲಿಯೇ ಇದ್ದಾನೆ.

ಇತ್ತೀಚೆಗಷ್ಟೆ ಆತನ ಮಗನ ಮದುವೆ ನೆರವೇರಿತ್ತು. ಮಗನ ಮದುವೆಯ ನಂತರ ಕೆಲವೊಂದು ವಸ್ತುಗಳನ್ನು ಕೆಂಪು ಬಣ್ಣದ ಪ್ಯಾಕೆಟ್‌ನಲ್ಲಿಟ್ಟು ತಂದೆ ವಧು-ವರರಿಗೆ ನೀಡಬೇಕೆಂಬ ಸಂಪ್ರದಾಯ ಅಲ್ಲಿದೆ. ಆದರೆ ತಂದೆ ಕೋಮಾದಲ್ಲಿ ಇದ್ದಿದ್ದರಿಂದ ಇದನ್ನು ನೆರವೇರಿಸುವುದು ಸಾಧ್ಯವಿರಲಿಲ್ಲ. ಪಟ್ಟು ಬಿಡದ ಮಗ ಆಸ್ಪತ್ರೆಯವರಿಂದ ಅನುಮತಿ ಪಡೆದುಕೊಂಡು ಆ ಸಂಪ್ರದಾಯವನ್ನು ನೆರವೇರಿಸಿದ್ದಾನೆ.

ವಧು-ವರರಿಬ್ಬರೂ ತಂದೆ ಅಡ್ಮಿಟ್‌ ಆಗಿದ್ದಲ್ಲಿಗೆ ಬಂದು ಕೋಮಾದಲ್ಲಿದ್ದ ಆತನ ಕೈಯ್ಯಲ್ಲಿ ಕೆಂಪನೆಯ ಪ್ಯಾಕೆಟ್‌ ಒಂದನ್ನು ಹಿಡಿಸಿದ್ದಾರೆ. ಆತನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಿದ್ದರಿಂದ ಕೆಲ ಸಮಯದ ಬಳಿಕ ಅದನ್ನು ತಾವೇ ವಾಪಸ್‌ ಪಡೆದುಕೊಂಡಿದ್ದಾರೆ.

ಈ ಸಂಪ್ರದಾಯ ಪಾಲಿಸಿದ್ರೆ ಅವರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ ಎಂಬುದು ನಂಬಿಕೆ. ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲವಂತೆ. ಅದೇನೇ ಆಗಿದ್ದರೂ ಇಂತಹ ಸಂದರ್ಭಗಳಲ್ಲಿಯೂ ಆಚರಣೆಗಳನ್ನು ಮಾಡಿದ್ದು ನೆಟ್ಟಿಗರಿಗೆ ಕೋಪ ತರಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read