ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಪುತ್ರಿ ವಾಮಿಕಾರೊಂದಿಗೆ ಡೇಟ್ ಮಾಡಲು ಮನವಿ ಮಾಡಿದ ಬಾಲಕನ ಪೋಷಕರ ವಿರುದ್ಧ ನಟಿ ಕಂಗನಾ ರಣಾವತ್ ಕಿಡಿಕಾರಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಐಪಿಎಲ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿಗೆ ಮನವಿ ಮಾಡಿದಂತೆ ಉದ್ದೇಶಿಸಿ ಬರೆದಿದ್ದ ಫಲಕವನ್ನು ಪುಟ್ಟ ಹುಡುಗ ಹಿಡಿದುಕೊಂಡಿದ್ದ ಫೋಟೋ ವೈರಲ್ ಆಗಿತ್ತು.
ಅದರಲ್ಲಿ ಎರಡು ವರ್ಷದ ವಾಮಿಕಾಳನ್ನು ಡೇಟಿಂಗ್‌ಗೆ ಕರೆದುಕೊಂಡು ಹೋಗಲು ವಿರಾಟ್ ಕೊಹ್ಲಿಗೆ ಆ ಹುಡುಗ ಅನುಮತಿ ಕೇಳಿದ್ದ. ಈ ಫೋಟೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ಇದೀಗ ನಟಿ ಕಂಗನಾ ರಣಾವತ್ ಕೂಡ ಈ ಸಾಲಿಗೆ ಸೇರಿದ್ದು ಪುಟ್ಟ ಹುಡುಗನ ಪೋಷಕರನ್ನು ಎಚ್ಚರಿಸಿದ್ದಾರೆ.
ಬಾಲಕ ಹಿಡಿದಿದ್ದ ಪೋಸ್ಟರ್ ನ ಮರುಹಂಚಿಕೊಂಡಿರುವ ಕಂಗನಾ ಟ್ವೀಟ್ ಮಾಡಿದ್ದು, “ಮುಗ್ಧ ಮಕ್ಕಳಿಗೆ ಈ ಅಸಂಬದ್ಧತೆಯನ್ನು ಕಲಿಸಬೇಡಿ, ಅದನ್ನ ಮಾರ್ಡನ್ ಅಥವಾ ಕೂಲ್ ಎನ್ನಲಾಗಲ್ಲ, ಬದಲಾಗಿ ಅಸಭ್ಯ ಮತ್ತು ಮೂರ್ಖತನದಂತೆ ಕಾಣುತ್ತದೆ” ಎಂದಿದ್ದಾರೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕಂಗನಾ ಮಾತಿಗೆ ದನಿಗೂಡಿಸಿದ್ದಾರೆ.
https://twitter.com/KanganaTeam/status/1648928029530554368?ref_src=twsrc%5Etfw%7Ctwcamp%5Etweetembed%7Ctwterm%5E1648929138684887040%7Ctwgr%5Eb6e4034303f561eaee0ed9c9631c5ac111d4fd02%7Ctwcon%5Es2_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fkanganaranautslamskidsproposaltoviratanushkasdaughtervamikasaysyebehooda-newsid-n491955482