ಕೊಲೆಸ್ಟ್ರಾಲ್‌ ಮತ್ತು ಸಕ್ಕರೆ ನಿಯಂತ್ರಣಕ್ಕೆ ಬೆಸ್ಟ್ ಬೆಂಡೆಕಾಯಿ ನೀರು

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಣ್ಣುಗಳು ಮತ್ತು ತರಕಾರಿಗಳ ಮೂಲಕ ಇದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಬೆಂಡೆಕಾಯಿ ಕೂಡ ಸಾಕಷ್ಟು ಪ್ರಯೋಜನಕಾರಿ. ಬೆಂಡೆಕಾಯಿಯನ್ನು ನೆನೆಸಿ ಬೆಳಗ್ಗೆ ಅದರ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಸಾಮಾನ್ಯವಾಗಿ ನಾವು ಅಡುಗೆಗೆ ಬೆಂಡೆಕಾಯಿಯನ್ನು ಬಳಸುತ್ತೇವೆ. ಬೆಂಡೆಕಾಯಿಯಿಂದ ತರಹೇವಾರಿ ತಿನಿಸುಗಳನ್ನು ತಯಾರಿಸುತ್ತೇವೆ. ಬೆಂಡೆಕಾಯಿ ನೀರು ಇವೆಲ್ಲಕ್ಕಿಂತಲೂ ಹೆಚ್ಚು ಆರೋಗ್ಯಕರ ಅಂಶಗಳನ್ನು ಹೊಂದಿದೆ.

ಬೆಂಡೆಕಾಯಿಯನ್ನು 8-24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಆ ನೀರನ್ನು ಸೇವಿಸಬೇಕು. ಇದರ ಬಗ್ಗೆ ಸಾಕಷ್ಟು ಸಂಶೋಧನೆಯೂ ನಡೆದಿದೆ. ಬೆಂಡೆಕಾಯಿ ಅತ್ಯಂತ ಪೌಷ್ಠಿಕ ತರಕಾರಿ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಬೆಂಡೆಕಾಯಿ ನೀರು ತೂಕ ನಷ್ಟವನ್ನು ಉತ್ತೇಜಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸುವುದು ಸೇರಿದಂತೆ ಹಲವಾರು ಇತರ ಪ್ರಯೋಜನಗಳನ್ನು  ಒದಗಿಸುತ್ತದೆ. ಬೆಂಡೆಕಾಯಿಯಲ್ಲಿ ಫೈಟೊಕೆಮಿಕಲ್‌ಗಳು, ಎಂಟಿಒಕ್ಸಿಡೆಂಟ್‌ಗಳು, ಪೊಟ್ಯಾಸಿಯಮ್, ವಿಟಮಿನ್ ಸಿ, ಕ್ಯಾಲ್ಸಿಯಂ, ಪ್ರೊಟೀನ್, ಫೋಲೇಟ್, ಲಿನೋಲಿಕ್ ಆಮ್ಲ ಸೇರಿದಂತೆ ಅನೇಕ ಪೋಷಕಾಂಶಗಳಿವೆ.

ಈ ಎಲ್ಲಾ ಅಂಶಗಳಿಂದ ದೇಹವು ಪೋಷಣೆಯನ್ನು ಪಡೆಯುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. ರಕ್ತದ ಕೊರತೆಯಿಂದ ಬಳಲುತ್ತಿರುವವರು ಬೆಂಡೆಕಾಯಿ ನೀರನ್ನು ಸೇವಿಸಬೇಕು. ಇದು ಕ್ಯಾನ್ಸರ್‌ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಸಕ್ಕರೆ ಕಾಯಿಲೆ ಇರುವವರು ವೈದ್ಯರ ಸಲಹೆ ಪಡೆದುಕೊಂಡು ನಿಯಮಿತವಾಗಿ ಬೆಂಡೆಕಾಯಿ ನೀರನ್ನು ಸೇವನೆ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read