ಕೊರೊನಾ ಬಳಿಕ ಮಕ್ಕಳಲ್ಲಿ ಹೆಚ್ಚಾಗಿದೆ ಈ ರೋಗದ ಅಪಾಯ, ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಯಲು…..!

ದೇಹ ಆರೋಗ್ಯವಾಗಿರಬೇಕೆಂದರೆ ಮನಸ್ಸು ಸರಿಯಾಗಿರುವುದು ಕೂಡ ಬಹಳ ಮುಖ್ಯ. ಆದರೆ ಕೊರೋನಾ ಸಾಂಕ್ರಾಮಿಕದ ನಂತರ ಜನರ ರೋಗನಿರೋಧಕ ಶಕ್ತಿ ದುರ್ಬಲವಾಗಿದೆ. ಮಾನಸಿಕ ಅಸ್ವಸ್ಥತೆಗಳ ಅಪಾಯವು ವೇಗವಾಗಿ ಹೆಚ್ಚುತ್ತಿದೆ. ವಿಶೇಷವಾಗಿ ಮಕ್ಕಳಲ್ಲಿ ಕೋವಿಡ್‌ ನಂತರ ಮಾನಸಿಕ ಅಸ್ವಸ್ಥತೆಯ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಗುಣಮಟ್ಟದ ಜೀವನದ ಕೊರತೆಯೇ ಇದಕ್ಕೆ ಕಾರಣವಿರಬಹುದು. ಇದರ ಜೊತೆಗೆ ಕಡಿಮೆ ಪೌಷ್ಟಿಕಾಂಶದ ಆಹಾರವೂ ಪರಿಣಾಮ ಬೀರುತ್ತದೆ.

ಕೆನಡಾದ ಆರೋಗ್ಯ ತಜ್ಞರು ನಡೆಸಿದ ಸಂಶೋಧನೆಯಲ್ಲಿ ಕರೋನಾ ಸಾಂಕ್ರಾಮಿಕದ ನಂತರ ಮಕ್ಕಳ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಮಾನಸಿಕ ಕಾಯಿಲೆಗಳ ಅಪಾಯವು ವೇಗವಾಗಿ ಹೆಚ್ಚುತ್ತಿದೆ ಎಂದು ಹೇಳಲಾಗಿದೆ. ಮಕ್ಕಳ ಮೇಲೆ ನಡೆಸಿದ ಈ ಆರೋಗ್ಯ ಸಮೀಕ್ಷೆಯಲ್ಲಿ ತಜ್ಞರು ಸುಮಾರು 32 ಸಾವಿರ ಮಕ್ಕಳ ಮಾನಸಿಕ ಆರೋಗ್ಯವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ್ದಾರೆ.

ಈ ಅಧ್ಯಯನದಲ್ಲಿ ಕಡಿಮೆ ಪೌಷ್ಠಿಕಾಂಶದ ಆಹಾರವನ್ನು ಸೇವಿಸಿದ ಮಕ್ಕಳು ಉಳಿದವರಿಗಿಂತ ಹೆಚ್ಚು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾರೆ ಎಂಬುದು ಕಂಡುಬಂದಿದೆ. ಕೊರೊನಾ ಪ್ರಪಂಚದಾದ್ಯಂತ ಭಯವನ್ನು ಹರಡಿತು. ಈ ಸಮಯದಲ್ಲಿ ಮತ್ತು ನಂತರ ಸರಿಯಾದ ಆಹಾರ ಮಕ್ಕಳಿಗೆ ಸಿಗುತ್ತಿಲ್ಲ. ಮಕ್ಕಳು ಹೆಚ್ಚು ಜಂಕ್ ಫುಡ್ ಸೇವಿಸುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯತ್ತ ಆಕರ್ಷಿತರಾಗುತ್ತಿದ್ದಾರೆ.

ಮಕ್ಕಳ ಮಾನಸಿಕ ಆರೋಗ್ಯ ಸದೃಢಗೊಳಿಸಲು ಅವರ ಆಹಾರ ಕ್ರಮದ ಬಗ್ಗೆ ಗಮನ ಹರಿಸುವುದು ಅಗತ್ಯ. ಹಸಿರು ತರಕಾರಿಗಳು, ಡೈರಿ ಉತ್ಪನ್ನಗಳು, ಧಾನ್ಯಗಳು ಮತ್ತು ನಟ್ಸ್‌ ಮಕ್ಕಳ ಆಹಾರದಲ್ಲಿ ಇರಬೇಕು. ಮಕ್ಕಳನ್ನು ಹೆಚ್ಚು ಜಂಕ್ ಫುಡ್ ಸೇವನೆಯಿಂದ ದೂರವಿಡುವ ಮೂಲಕ ಅವರ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read