ಕೈ ತೋಟದಲ್ಲೆ ಸುಲಭವಾಗಿ ಬೆಳೆಸಬಹುದು ಆರೋಗ್ಯ ಕಾಪಾಡುವ ಈ ಸೊಪ್ಪು

ಗಾರ್ಡನ್ ನ ಅಂದವನ್ನೂ ಹೆಚ್ಚಿಸಿ, ಆರೋಗ್ಯವನ್ನೂ ಕಾಪಾಡುವ ಕೆಲವು ಸೊಪ್ಪುಗಳ ಬಗ್ಗೆ ನಿಮಗೆ ತಿಳಿದಿರಲಿ.

ಅರಿಶಿನಕ್ಕೆ ಔಷಧೀಯವಾಗಿ ಮಹತ್ವದ ಸ್ಥಾನವಿದೆ ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಇದನ್ನು ನಿಮ್ಮ ಮನೆಯಂಗಳದಲ್ಲೂ ಬೆಳೆಯಬಹುದು ಎಂಬುದು ನಿಮಗೆ ಗೊತ್ತೇ. ಹೌದು ಇದರ ಎಲೆಯಿಂದಲೂ ರುಚಿಕರವಾದ ತಿಂಡಿಯನ್ನು ತಯಾರಿಸಿ ಸವಿಯಬಹುದು.

ಅಂಗಡಿಯಿಂದ ತಂದ ಪುದೀನಾದ ಕೆಳ ಭಾಗವನ್ನು ಕತ್ತರಿಸಿ ಎಸೆಯುವ ಬದಲು ಮನೆಯಂಗಳದಲ್ಲಿ ನೆರಳಿನ ಜಾಗದಲ್ಲಿರುವ ಹೂ ಬುಟ್ಟಿಯಲ್ಲಿ ಹೂತಿಡಿ. ಕೆಲವೇ ದಿನಗಳಲ್ಲಿ ಅದು ಜೀವ ಪಡೆದುಕೊಂಡು ನಿಮಗೆ ಅಗತ್ಯವಿರುವಷ್ಟು ಪುದೀನಾ ಸೊಪ್ಪುಗಳನ್ನು ಒದಗಿಸುತ್ತದೆ.

ತುಳಸಿ, ಬ್ರಾಹ್ಮೀ ಎಲೆ, ಅಮೃತಬಳ್ಳಿ, ಸಾಮ್ರಾಣಿ ಸೊಪ್ಪುಗಳು ನಿಮ್ಮ ಗಾರ್ಡನ್ ಅನ್ನೂ ಅಂದವಾಗಿಸುತ್ತದೆ ಮಾತ್ರವಲ್ಲ ಹಲವು ಬಗೆಯ ರೋಗಗಳಿಗೂ ಮದ್ದಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read