ಕೆಲ ರೈಲುಗಳ ಸಂಚಾರ ತಾತ್ಕಾಲಿಕ ರದ್ದು; ಇಲ್ಲಿದೆ ಮಾಹಿತಿ

ಫೆಬ್ರವರಿ 16 ರಿಂದ 23 ರ ವರೆಗೆ ಬೆಂಗಳೂರಿನಿಂದ ಹೊರಡುವ ಕೆಲವು ರೈಲುಗಳ ಸಂಚಾರ ತಾತ್ಕಾಲಿಕ ರದ್ದುಗೊಂಡಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.

ಗುಂತಕಲ್ ವಿಭಾಗದ ಚಿಗಿಚರ್ಲಾ – ಧರ್ಮಾವರಂ ನಿಲ್ದಾಣಗಳ ನಡುವಿನ ನಾನ್ ಇಂಟರ್ಲಾಕಿಂಗ್ ಜೋಡಿ ಮಾರ್ಗದ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ತಾತ್ಕಾಲಿಕ ಅಥವಾ ಭಾಗಶಃ ರದ್ದು ಮಾಡಲಾಗಿದೆ.

ಫೆಬ್ರವರಿ 19 ಮತ್ತು ಫೆಬ್ರವರಿ 20ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 06591 ಯಶವಂತಪುರ – ಹೊಸೂರು ವಿಶೇಷ ಮೆಮು ಎಕ್ಸ್ ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ಹಾಗೆಯೇ ಫೆಬ್ರವರಿ 19 ಮತ್ತು ಫೆಬ್ರವರಿ 20ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 06592 ಹೊಸೂರು – ಯಶವಂತಪುರ ವಿಶೇಷ ಮೆಮು ಎಕ್ಸ್ ಪ್ರೆಸ್ ರೈಲನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಇನ್ನು ಫೆಬ್ರವರಿ 22 ರ ವರೆಗೆ ಕೆಆರ್‌ಎಸ್‌ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 06595 ಕೆಎಸ್ಆರ್ – ಬೆಂಗಳೂರು – ಧರ್ಮಾವರಂ ರೈಲನ್ನು ಹಿಂದೂಪುರ – ಧರ್ಮಾವರಂ ನಿಲ್ದಾಣ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಈ ರೈಲು ಧರ್ಮಾವರಂ ನಿಲ್ದಾಣದ ಬದಲಿಗೆ ಹಿಂದೂಪುರದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

ಹಾಗೆಯೇ ಫೆಬ್ರವರಿ 22 ರ ವರೆಗೆ ಧರ್ಮಾವರಂ ನಿಂದ ಹೊರಡುವ ರೈಲು ಸಂಖ್ಯೆ 06596 ಧರ್ಮಾವರಂ – ಕೆಎಸ್ಆರ್ ಬೆಂಗಳೂರು ರೈಲನ್ನು ಧರ್ಮಾವರಂ – ಹಿಂದೂಪುರ ನಿಲ್ದಾಣ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಈ ರೈಲು ಧರ್ಮಾವರಂ ನಿಲ್ದಾಣದ ಬದಲಿಗೆ ಹಿಂದೂಪುರದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read