ಕೂದಲ ಬೆಳವಣಿಗೆಗೆ ಅತ್ಯಗತ್ಯ ಪ್ರೋಟೀನ್ ಹೇರ್ ಮಾಸ್ಕ್

ಕೂದಲಿಗೆ ಪ್ರೋಟೀನ್ ಬಹಳ ಅಗತ್ಯ. ಕೂದಲ ಬೆಳವಣಿಗೆಗೆ ಪ್ರೋಟೀನ್ ಅಂಶ ಬೇಕು. ಹಾಗಾಗಿ ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯಲು ಮನೆಯಲ್ಲಿಯೇ ಪ್ರೋಟೀನ್ ಹೇರ್ ಮಾಸ್ಕ್ ತಯಾರಿಸಿ ಬಳಸಿ.

*ಮೊಟ್ಟೆ ಮತ್ತು ಮೊಸರು ಪ್ರೋಟೀನ್ ನ ಮೂಲವಾಗಿದೆ. ಮೊಟ್ಟೆ ಕೂದಲನ್ನು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ. ಮೊಸರು ನೆತ್ತಿಯನ್ನು ಕ್ಲೀನ್ ಮಾಡುತ್ತದೆ. 1 ಮೊಟ್ಟೆಗೆ 2 ಚಮಚ ಮೊಸರು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರಕ್ಕೆ 2 ಬಾರಿ ಮಾಡಿ.

* ಅವಕಾಡೊ, ತೆಂಗಿನ ಹಾಲು, ಆಲಿವ್ ಎಣ್ಣೆ ಈ ಮೂರು ವಿಟಮಿನ್ ಎ, ಬಿ, ಇ ಯನ್ನು ಹೊಂದಿದೆ. ಇವುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಹಾಗಾಗಿ ಈ ಮೂರನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಉದ್ದವಾಗಿ, ದಪ್ಪವಾಗಿ ಬೆಳೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read