ಕೂದಲು ಸೀಳುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು…!

ಕೂದಲಿನ ತುದಿ ಒಡೆಯುವುದು, ಎರಡು ಭಾಗವಾಗುವುದು ಇಂದಿನ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಪೌಷ್ಟಿಕಾಂಶದ ಕೊರತೆ, ಸರಿಯಾಗಿ ಆರೈಕೆ ಮಾಡದಿರುವುದು, ಕೊಳಕು ಮೊದಲಾದ ಕಾರಣಗಳು ಇರಬಹುದು. ತುದಿ ಕತ್ತರಿಸಿದ ಬಳಿಕವೂ ನಿಮ್ಮ ಕೂದಲು ಮತ್ತೆ ಸೀಳಬಹುದು.

ಇದರ ನಿವಾರಣೆಗೆ ಜೇನುತುಪ್ಪ ಬಳಸಬಹುದು. 2 ಚಮಚ ಜೇನಿಗೆ ಅರ್ಧ ಕಪ್ ಮೊಸರು ಹಾಗೂ ಒಂದು ಚಮಚ ಆಲಿವ್ ಆಯಿಲ್ ಸೇರಿಸಿ. ಅವುಗಳನ್ನು ಚೆನ್ನಾಗಿ ಕಲಕಿ ಹಚ್ಚಿ. ಮೂವತ್ತು ನಿಮಿಷಗಳ ಬಳಿಕ ನಿಮ್ಮ ಕೂದಲನ್ನು ತೊಳೆಯಿರಿ.

ನೀರು ಕುದಿಸಿ. ಅದಕ್ಕೆ ಟೀ ಪ್ಯಾಕ್ ಗಳನ್ನು ಸೇರಿಸಿ. ಎರಡು ನಿಮಿಷ ಕುದಿದ ಬಳಿಕ ನೀರನ್ನು ತಣ್ಣಗಾಗಲು ಬಿಡಿ. ಇದರಿಂದ ನಿಮ್ಮ ತಲೆಯನ್ನು ಮಸಾಜ್ ಮಾಡಿ. ಕೂದಲಿಗೂ ಹಚ್ಚಿ. ಇದರಿಂದ ಕೂದಲಿಗೆ ಪೋಷಕಾಂಶವೂ ದೊರೆಯುತ್ತದೆ. ಕೂದಲು ಸೀಳುವುದೂ ನಿಲ್ಲುತ್ತದೆ.

ಮೊಟ್ಟೆಯ ಹಳದಿ ಭಾಗಕ್ಕೆ ಆಲಿವ್ ಎಣ್ಣೆ, ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ. ಈ ಮಾಸ್ಕ್ ಅನ್ನು ಕೂದಲಿಗೆ ಸಂಪೂರ್ಣವಾಗಿ ಹಚ್ಚಿ 30 ನಿಮಿಷದ ಬಳಿಕ ತೊಳೆಯಿರಿ. ಇದರಿಂದ ಕೂದಲು ನೈಸರ್ಗಿಕ ಹೊಳಪನ್ನೂ ಪಡೆಯುತ್ತದೆ. ಕೂದಲಿನ ತುದಿಗಳ ಸಮಸ್ಯೆಯನ್ನೂ ದೂರ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read